ಪ್ರೇರಣಾ ಸೌಹರ್ದ ಸಹಕಾರಿ ಸಂಘದ ಮಹಾಸಭೆ

ಬೆಳ್ತಂಗಡಿ: ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಸಹಕಾರಿ ಸಂಘವಾಗಿ ಮಾರ್‍ಪಾಟಿದೆ. ಕಡಿಮೆ ಅವಧಿಯಲ್ಲಿ ಒಟ್ಟು 1225 ಗ್ರಾಹಕರನ್ನು ಹೊದಿರುವ ಸಂಸ್ಥೆಯಾಗಿದೆ ಸಾಲಕ್ಕೆ ಬಂದವರನ್ನು ತಕ್ಷಣ ಸಾಲ ಮಂಜೂರು ಮಾಡಿಕೊಟ್ಟಿದೆ. ಸಂಘವು ಪ್ರಾರಂಭ ಮಾಡಲು ಕೊಟ್ಟ ಪ್ರೋತ್ಸಾಹಕ್ಕೆ ನಾವು ಯಾವಾಗಲು ಚಿರಋಣಿಯಾಗಿದ್ದೇವೆ ಎಂದು ಸಂಘದ ಅಧ್ಯಕ್ಷ ಲ್ಯಾನ್ಸಿ ಎ. ಪಿರೇರಾ ಹೇಳಿದರು.
ಆ.22 ರಂದು ಸಂಘದ ಕಛೇರಿಯಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಸಂಘವು ವರ್ಷಾಂತ್ಯಕ್ಕೆ ರೂ.17 ಲಕ್ಷ ರೂ. 49 ಸಾವಿರ ಪಾಲು ಬಂಡವಾಳ ಹೊಂದಿದ್ದು. 2017-18ನೇ ಸಾಲಿನಲ್ಲಿ ರೂ. 14 ಕೋಟಿ 40ಲಕ್ಷ ವ್ಯವಹಾರ ಮಾಡಿದೆ ಎಂದರು. ರೂ.2 ಕೋಟಿ 61 ಲಕ್ಷ ಠೇವಣಿ ಸಂಗ್ರಹವಾಗಿದೆ. ಸಂಘವು ಆರ್ಥಿಕ ವರ್ಷದಲ್ಲಿ 13 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಕ್ಯಾನ್ಸರ್ ಪೀಡಿತದಿಂದ ಬಳಲುತ್ತಿದ್ದ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಾಗಿದೆ ಎಂದರು.
ಮಹಾಸಭೆಯ ಬಳಿಕ ಟ್ಯಾಕ್ಸ್ ಮತ್ತು ಜಿಎಸ್‌ಟಿ ಬಗ್ಗೆ ಬೆಳ್ತಂಗಡಿಯ ಸಿಎ ಮಿಥುನ್ ಮೆಲ್ವಿನ್ ಮೊಡ್ತಾ ಮಾಹಿತಿ ನೀಡಿದರು. ವೇದಿಕೆಯಲ್ಲಿ ನಿರ್ದೇಶಕರುಗಳಾದ ಎಲೋಸಿಯಸ್ ಎಸ್ ಲೋಬೊ, ಜೋನ್ ಆಲ್ವಿನ್ ಪಿಂಟೊ, ವಿಲ್ಸನ್ ಜೋರ್ಜ್ ಗೊನ್ಸಾಲ್ವಿಸ್, ಬೆನಡಿಕ್ಟ್ ವೇಗಸ್, ತಿಯೋಫಿಲಾ ಡಿಸೋಜ, ಶ್ರೀಮತಿ ಸ್ಟೆಲ್ಲಾ ಫ್ರಾಂಕ್, ಶ್ರೀಮತಿ ಸೆಲಿನ್ ನೊರೋನ್ಹಾ ಉಪಸ್ಥಿತರಿದ್ದರು. ವಿನ್ಸೆಂಟ್ ಡಿಸೋಜ ಬಳಗ ಪ್ರಾರ್ಥನೆ ಹಾಡಿದರು.
ಅಧ್ಯಕ್ಷ ಲ್ಯಾನ್ಸಿ ಎ ಪಿರೇರಾ ಸ್ವಾಗತಿಸಿದರು. ಉಪಾಧ್ಯಕ್ಷ ವಿನ್ಸೆಂಟ್ ಟಿ. ಡಿಸೋಜ ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಐರಿನ್ ಡಿಸೋಜ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು.
ನಿರ್ದೇಶಕ ಜಾನ್ ಅಮೀನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಹಿಲರಿ ಮೆಂಡೂನ್ಸಾ, ಸಿಲ್ವೆಸ್ಟರ್ ಡಿಸೋಜ, ರೋನಾಲ್ಡ್ ಸಿಕ್ವೇರಾ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.