ಶ್ರೀ ಧನಲಕ್ಷ್ಮೀ ಜ್ಯುವೆಲ್ಲರ್‍ಸ್‌ನಲ್ಲಿ ಗೋಲ್ಡ್ ಫೆಸ್ಟಿವಲ್

Advt_NewsUnder_1
Advt_NewsUnder_1

ಉಜಿರೆ : ಇಲ್ಲಿಯ ಪೇಟೆಯಲ್ಲಿರುವ ಪ್ರತಿಷ್ಠಿತ ಚಿನ್ನಾಭರಣಗಳ ಮಾರಾಟ ಮಳಿಗೆ ಶ್ರೀ ಧನಲಕ್ಷ್ಮಿ ಜುವೆಲ್ಲರ್‍ಸ್ ಇವರು ಈ ಹಿಂದಿನ ವರ್ಷಗಳಂತೆ ಈ ಬಾರಿಯೂ ಆಯೋಜಿಸಿದ್ದ 10ನೇ ವರ್ಷದ ಗೋಲ್ಡ್ ಫೆಸ್ಟಿವಲ್-2018ರ ಡ್ರಾ ಆ.15 ರಂದು ನಡೆಯಿತು.
ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ, ಮಂಗಳೂರಿನ ಲೆಕ್ಕ ಪರಿಶೋಧಕ ಕೃಷ್ಣ ಮೋಹನ್ ಎಸ್, ಮಂಗಳೂರಿನ ಚಿನ್ನಾಭರಣಗಳ ಮಳಿಗೆ ಶ್ರೀ ಮಂಗಳ ಜ್ಯುವೆಲ್ಲರ್‍ಸ್‌ನ ಮಾಲಕ ಮಚ್ಚೇಂದ್ರ(ಸಚಿನ್) ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ ಬೆಳ್ತಂಗಡಿ ಶಾಖೆಯ ಅಧಿಕಾರಿ ಸತೀಶ್ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಸಂಸ್ಥೆಯಲ್ಲಿ ಗೋಲ್ಡ್ ಫೆಸ್ಟಿವಲ್-2018 ಆಯೋಜಿಸಿದ್ದ ಫೆ.1 ರಿಂದ ಆ.15ರ ಅವಧಿಯಲ್ಲಿ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಖರೀದಿಸಿದ ಗ್ರಾಹಕರಿಗೆ ಪ್ರತಿ ರೂ ಎರಡು ಸಾವಿರಕ್ಕೆ ಒಂದರಂತೆ ಗಿಫ್ಟ್ ಕೂಪನ್‌ಗಳನ್ನು ನೀಡಲಾಗಿತ್ತು.
ಮಾಲಿಕರ ಮಾತಾಪಿತರಾದ ಶ್ರೀಮತಿ ಮೋಹಿನಿ ಬಿ.ಆಚಾರ್ಯ ಮತ್ತು ಕೆ.ಬಾಲಕೃಷ್ಣ ಆಚಾರ್ಯ ಮತ್ತು ಅತಿಥಿಗಳು ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮವು ಶುಭಾರಂಭಗೊಂಡಿತು. ಈ ಸಂದರ್ಭದಲ್ಲಿ ಶಾಸಕರನ್ನು ಮಾಲಿಕರ ವತಿಯಿಂದ ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಅತಿಥಿಗಳು ಮತ್ತು ಮಾಲಿಕರ ಮಾತಾಪಿತರು ಸೇರಿ ಕಾಯಿನ್ ಸಿಸ್ಟಮ್‌ನಲ್ಲಿ ಡ್ರಾ ನಡೆಸಿ ವಿಜೇತರನ್ನು ಆರಿಸಿದರು. ಮಳಿಗೆಯಲ್ಲಿ ಚಾಲ್ತಿಯಲ್ಲಿರುವ ಗಿಫ್ಟ್ ಸ್ಕೀಮಿನ ಮೆಂಬರ್‌ಗಳಿಗೂ ಇದೇ ಸಮಯದಲ್ಲಿ ಒಂದು ಸ್ಪೆಷಲ್ ಡ್ರಾ ನಡೆಸಲಾಯಿತು. ಪ್ರತಿ ಗ್ರೂಪಿನಲ್ಲಿ ಒಬ್ಬರಂತೆ ಎಲ್ಲಾ ಗ್ರೂಪಿನ ಮೆಂಬರ್‌ಗಳಿಗೂ ಗಣ್ಯ ಅತಿಥಿಗಳು ಮತ್ತು ಗ್ರಾಹಕರು ಚೀಟಿ ಎತ್ತುವುದರ ಮೂಲಕ ಡ್ರಾ ನಡೆಸಿ ಲಕ್ಕಿ ವಿಜೇತರನ್ನು ಆರಿಸಿದರು.
ಉಜಿರೆಯ ಎಸ್‌ಡಿಎಂ ಕಾಲೇಜಿನ ಪ್ರಾಧ್ಯಾಪಕರಾದ ಶ್ರೀಧರ ಭಟ್ ಕಾರ್ಯಕ್ರಮ ನಿರೂಪಿಸಿ, ಶ್ರೀ ಗೋಕರ್ಣನಾಥ ಬ್ಯಾಂಕಿನ ನಿರ್ದೇಶಕ ಜಯಶಂಕರ್ ಎಂ.ಬಿ ಸಹಕರಿಸಿದರು. ಪ್ರೀತಮ್ ರಾಜ್, ರಿತಿಕಾ ರಮೇಶ್, ಆಶಿಕ ಹರೀಶ್, ರಿಷಿತ ರಾಜೇಶ್ ಮತ್ತು ಅಂಶಿಕ ಹರೀಶ್ ಇವರು ಹೂ ನೀಡಿ ಅತಿಥಿಗಳನ್ನು ಸ್ವಾಗತಿಸಿದರು. ಮಾಲಿಕರಾದ ಕೆ.ರಮೇಶ್ ಕುಮಾರ್ ಎಲ್ಲಾ ವಿಜೇತರನ್ನು ಅಭಿನಂದಿಸಿದರು ಮತ್ತು ಗ್ರಾಹಕರ ಸಹಕಾರ ಪ್ರೋತ್ಸಾಹಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾ ಮುಂದೆಯೂ ಇದೇ ರೀತಿಯಾಗಿ ಸಹಕಾರ ನೀಡುವಂತೆ ಕೋರಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ರೂಪಕಲಾ ರಮೇಶ್, ಸಹೋದರರಾದ ಕೆ.ಹರೀಶ್ ಕುಮಾರ್, ಕೆ. ರಾಜೇಶ್ ಕುಮಾರ್, ಶ್ರೀಮತಿ ಆಶಾ ಹರೀಶ್, ಶ್ರೀಮತಿ ಅನಿತಾ ರಾಜೇಶ್ ಹಾಗೂ ಗ್ರಾಹಕರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.