ಕನ್ಯಾಡಿಯಲ್ಲಿ ಧರ್ಮ ಸಂಸದ್ ಸಮಾಲೋಚನಾ ಸಭೆ

Advt_NewsUnder_1
Advt_NewsUnder_1

ಧರ್ಮಸ್ಥಳ: ಶ್ರೀರಾಮಕ್ಷೇತ್ರದ ನಿತ್ಯಾನಂದ ನಗರದಲ್ಲಿ ಕ್ಷೇತ್ರದ ಪೀಠಾಧೀಶರಾದ ಸದ್ಗರು ಶ್ರೀ ಬ್ರಹ್ಮಾನಂದ ಸ್ವಾಮೀಜಿಯವರ ಪಟ್ಟಾಭಿಷೇಕ ದಶಮಾನೋತ್ಸವದ ಅಂಗವಾಗಿ ಸೆ.3 ರಂದು ನಡೆಯಲಿರುವ ರಾಷ್ಟ್ರೀಯ ಧರ್ಮಸಂಸದ್ ಅಂಗವಾಗಿ ಸಮಾಲೋಚನಾ ಸಭೆಯು ಆ.20 ರಂದು ಕನ್ಯಾಡಿಯಲ್ಲಿ ಜರುಗಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶಾಸಕ ಹರೀಶ್ ಪೂಂಜ ರವರು ಸಮಿತಿಗಳ ಜವಾಬ್ದಾರಿ ಹಂಚಿಕೆಯ ಬಗ್ಗೆ ವಿವರಣೆ ನೀಡಿದರು. ಪೀಠಾಧೀಶರಾದ ಸದ್ಗರು ಶ್ರೀ ಬ್ರಹ್ಮಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಧರ್ಮಸಂಸದ್ ಕಾರ್ಯಾಧ್ಯಕ್ಷ ಪೀತಾಂಬರ ಹೇರಾಜೆ, ಟ್ರಸ್ಟಿಗಳಾದ ಚಿತ್ತರಂಜನ್ ಗರೋಡಿ, ಮೋಹನ್ ಉಜ್ಜೋಡಿ, ಧರ್ಮಸಂಸದ್ ಜಿಲ್ಲಾ ಪ್ರಧಾನ ಸಂಚಾಲಕ ಸತ್ಯಜಿತ್ ಸುರತ್ಕಲ್, ಧರ್ಮಸಂಸದ್ ತಾಲೂಕು ಸಂಚಾಲಕ ಸಂಪತ್.ಬಿ ಸುವರ್ಣ, ಶರತ್‌ಕೃಷ್ಣ ಪಡ್ವೆಟ್ನಾಯ, ಜಿ.ಪಂ ಸದಸ್ಯರಾದ ಧರಣೇಂದ್ರ ಕುಮಾರ್, ಕೊರಗಪ್ಪ ನಾಯ್ಕ, ಅನಂತರಾಮ ರಾವ್ ಚಾರ್ಮಾಡಿ, ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.