ಗುರುವಾಯನಕೆರೆ ನಮ್ಮೂರ ಪ್ರೌಢ ಶಾಲೆಯಲ್ಲಿ ವಾಲಿಬಾಲ್ ಪಂದ್ಯಾಟ

Advt_NewsUnder_1
Advt_NewsUnder_1

ಗುರುವಾಯನಕೆರೆ ನಮ್ಮೂರ ಪ್ರೌಢ ಶಾಲೆಯಲ್ಲಿ ಪುಂಜಾಲಕಟ್ಟೆ ಕ್ಲಸ್ಟರ್‌ನ 13 ಪ್ರೌಢ ಶಾಲೆಗಳ ವಾಲಿಬಾಲ್ ಪಂದ್ಯಾಟ ಆ. 20 ರಂದು ಜರುಗಿತು.
ಕುವೆಟ್ಟು ಗಾ.ಪಂ ಅಧ್ಯಕ್ಷ ಅಶೋಕ ಕೋಟ್ಯಾನ್ ಉದ್ಘಾಟನೆ ನೆರವೇರಿಸಿ, ವಿದ್ಯಾರ್ಥಿಗಳಿಗೆ ಕೇವಲ ಕಲಿಕೆ ಮಾತ್ರವಲ್ಲದೆ ಕ್ರೀಡೆಯ ಮೂಲಕವೂ ಮನಸ್ಸು ಮತ್ತು ದೇಹವನ್ನು ಕ್ರಿಯಾಶೀಲವಾಗಿಡುವ ಬಗ್ಗೆ ಇಂತಹಾ ಕ್ರೀಡಾ ಕೂಟಗಳು ಪೂರಕವಾಗಿರುತ್ತದೆ ಎಂದರು.
ಸಮಾರಂಭದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷ ಅಬ್ದುಲ್ ಲೆತೀಫ್, ಶಿಕ್ಷಣ ಪ್ರೇಮಿ ಅಲ್ಫೋನ್ಸ್ ಫ್ರಾಂಕೋ, ತಾ.ಪಂ ಸದಸ್ಯ ಗೋಪಿನಾಥ ನಾಯಕ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಜಿತ್ ಕುಮಾರ್ ಕೊಕ್ರಾಡಿ ಉಪಸ್ಥಿತರಿದ್ದರು.
ಅಧ್ಯಾಪಕವೃಂದವರಾದ ತ್ರಿವೇಣಿ, ಸುರೇಖಾ, ಸವಿತಾ ದೇವರಮಣಿ, ಸಾಧನಾ, ವಿ.ಕೆ ವಿಟ್ಲ, ಪ್ರದೀಪ್ ಡಿ, ಸಿಬಂದಿಗಳಾದ ಸುಧಾ ಸುರೇಶ್ ಹಾಗೂ ಬಿಸಿಯೂಟ ಸಿಬಂದಿಗಳು ಸಹಕಾರ ನೀಡಿದರು.
ಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ಜಗನ್ನಾಥ ಸ್ವಾಗತಿಸಿದರು. ಶಿಕ್ಷಕರಾದ ಯೋಗೀಶ್ ನಾಯಕ್ ಕಾರ್ಯಕ್ರಮ ನಿರೂಪಿಸಿ, ಅನ್ನಮ್ಮ ವಂದನಾರ್ಪಣೆಗೈದರು. ಪಂದ್ಯಾಟದ ಎಲ್ಲಾ ಫಲಕಗಳನ್ನು ಸೋಜಾ ಎಲೆಕ್ಟ್ರಾನಿಕ್ಸ್ ಬೆಳ್ತಂಗಡಿ ಇವರು ಪ್ರಾಯೋಜಿಸಿದರು. ಪಂದ್ಯಾಟಕ್ಕಾಗಿ ಕ್ರೀಡಾಂಗಣ ಸಜ್ಜುಗೊಳಿಸುವಲ್ಲಿ ಕರಾಯ ಶಾಲಾ ಶಿಕ್ಷಕರಾದ ಮೋಹನ್ ವಿಶೇಷ ಸೇವೆ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.