ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ 8ನೇ ವೇಣೂರು ಶಾಖೆ ಉದ್ಘಾಟನೆ

Advt_NewsUnder_1
Advt_NewsUnder_1

ವೇಣೂರು: ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಇದರ ವೇಣೂರು 8ನೇ ಶಾಖೆಯ ಉದ್ಘಾಟನೆಯು ಆ. 19 ರಂದು ವೇಣೂರು ಗಾರ್ಡನ್ ವ್ಯೂವ್ ವಾಣಿಜ್ಯ ಮಳಿಗೆಯಲ್ಲಿ ಜರುಗಿತು. ಮಾಜಿ ಶಾಸಕ ಹಾಗೂ ಸಹಕಾರಿ ಸಂಘದ ಸ್ಥಾಪಕ ನಿರ್ದೇಶಕ ಕೆ.ವಸಂತ ಬಂಗೇರ ಉದ್ಘಾಟನೆಯನ್ನು ನೆರವೇರಿಸಿದರು.
ಸಹಕಾರಿ ಸಂಘದ ಅಧ್ಯಕ್ಷ ಎನ್ ಪದ್ಮನಾಭ ಮಾಣಿಂಜ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾದ ನಾರಾವಿ ಜಿ.ಪಂ ಸದಸ್ಯ ಪಿ ಧರಣೇಂದ್ರ ಕುಮಾರ್, ವೇಣೂರು ತಾ.ಪಂ ಸದಸ್ಯ ವಿಜಯ ಗೌಡ, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಜಯರಾಮ ಶೆಟ್ಟಿ, ವೇಣೂರು ಗ್ರಾ.ಪಂ ಅಧ್ಯಕ್ಷೆ ಮೋಹಿನಿ ಇವರುಗಳು ಕ್ರಮವಾಗಿ ಸಂಘದ ಭದ್ರತಾ ಕೋಶ, ಗಣಕಯಂತ್ರ ವಿಭಾಗ, ನಿರಖು ಠೇವಣಿ ಸರ್ಟಿಫಿಕೇಟ್ ವಿತರಣೆ, ನಿರಖು ಠೇವಣಿ ಅಧೃಷ್ಟ ಚೀಟಿ ಆಯ್ಕೆ, ಉಳಿತಾಯ ಖಾತೆ ಅದೃಷ್ಟ ಚೀಟಿ ಆಯ್ಕೆ ಇತ್ಯಾಧಿ ಪ್ರಕ್ರೀಯೆ ನಡೆಸಿಕೊಟ್ಟರು.

ಸಮಾರಂಭದಲ್ಲಿ ವೇಣೂರು ಸಹಕಾರಿ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ, ವೇಣೂರು ಗಉರು. ನಾ, ಸ್ವಾ ಸೇವಾ ಸಂಘದ ಅಧ್ಯಕ್ಷ ಪೂವಪ್ಪು ಪೂಜಾರಿ, ಬೆಳ್ತಂಗಡಿ ಕೇಂದ್ರ ಸಂಘದ ಪ್ರ. ಕಾರ್ಯದರ್ಶಿ ರಾಕೇಶ್ ಕುಮಾರ್ ಮೂಡುಕೋಡಿ, ಪಡ್ಡಂದಡ್ಕ ಜುಮ್ಮಾ ಮಸ್ಜಿದ್ ಮಾಜಿ ಅಧ್ಯಕ್ಷ ಖಾಲಿದ್ ಪುಲಾಬೆ, ಯುವವಾಹಿನಿ ವೇಣೂರು ಘಟಕದ ಅಧ್ಯಕ್ಷ ನಿತೀಶ್ ಹೆಚ್, ವೇಣೂರಿನ ಉದ್ಯಮಿ ಭಾಸ್ಕರ ಪೈ, ಗಾರ್ಡನ್‌ವ್ಯೂ ಕಾಂಪ್ಲೆಕ್ಸ್ ಮಾಲಕ ಮಾರ್ಕ್ ಎಗ್ಬರ್ಟ್ ಪಿರೇರಾ ಮುಖ್ಯ ಅತಿಥಿಗಳಾಗಿದ್ದು ಸಂದರ್ಭೋಚಿತವಾಗಿ ಶುಭ ಕೋರಿದರು. ಗುರುದೇವ ಸಹಕಾರಿ ಸಂಘದ ನಿರ್ದೇಶಕರಾದ ಶೇಖರ ಬಂಗೇರ, ಕೆ.ಪಿ ದಿವಾಕರ, ಜನಾರ್ದನ ಪೂಜಾರಿ, ಸತೀಶ್ ಕಾಶಿಪಟ್ಣ, ಧರ್ಣಪ್ಪ ಪೂಜಾರಿ, ಸಂಜೀವ ಪೂಜಾರಿ ಮತ್ತು ಜಗದೀಶ್ಚಂದ್ರ ಡಿ.ಕೆ ಉಪಸ್ಥಿತರಿದ್ದರು.

ಈ ಸಮಾರಂಭದಲ್ಲಿ ಸ್ಥಳೀಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಆಕೃತಿ ಮತ್ತು ನಿಖಿತಾ ಇವರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಸನ್ಮಾನಿಸುವ ಮೂಲಕ ಪ್ರೋತ್ಸಾಹಿಸಲಾಯಿತು. ಅವರ ಪರಿಚಯವನ್ನು ರಾಕೇಶ್ ಬಿ.ಎಲ್, ಮತ್ತು ಶಿವ ಪ್ರಕಾಶ್ ನಡೆಸಿಕೊಟ್ಟರು. ಸಹಕಾರಿ ಸಂಘದ ಕಚೇರಿ ನಿಮಾರ್ಣದ ವೇಳೆ ಕೌಂಟರ್ ಕೆಲಸ ನಿರ್ವಹಿಸಿದ ನಾರಾಯಣ ಆಚಾರಿ, ಎಲೆಕ್ಟ್ರೀಶಿಯನ್ ಯೋಗೀಶ್ ಬಿಕ್ರೋಟ್ಟು, ಪ್ಯಾಬ್ರಿಕೇಶನ್ ಕೆಲಸ ಮಾಡಿದ ಶಿವಾನಂದ ಮತ್ತು ಪೈಂಟರ್ ಪ್ರದೀಪ್ ಇವರನ್ನು ಗುರುತಿಸಲಾಯಿತು. ಕು. ಮಮತಾ ಅವರ ಆರ್ಥಿಕ ಸಂಕಷ್ಟವನ್ನು ಮನಗಂಡು ಧನಸಹಾಯವನ್ನು ವಿತರಿಸಲಾಯಿತು. ಗುರುದೇವ ಸಹಕಾರಿ ಸಂಘದ ಬೆಳ್ತಂಗಡಿ ಕೇಂದ್ರ ಕಚೇರಿ ಕಾರ್ಯನಿರ್ವಹಣಾಧಿಕಾರಿ ಅಶ್ವತ್ಥ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ವೇಣೂರು ನೂತನ ಶಾಖೆಯ ನಿಯೋಜಿತ ಶಾಖಾ ವ್ಯವಸ್ಥಾಪಕಿ ನಿಶ್ಮಿತಾ ರಾಜೇಶ್, ಹಾಗೂ ಎಲ್ಲಾ ಶಾಖೆಗಳ ವ್ಯವಸ್ಥಾಪಕರು ಮತ್ತು ಸಿಬಂದಿಗಳು ಸಹಕಾರ ನೀಡಿದರು.

ನಿರ್ದೇಶಕ ಭಗೀರಥ ಜಿ ಸ್ವಾಗತಿಸಿದರು. ಸಂಘದ ವಿಶೇಷ ಅಧಿಕಾರಿ ಎಂ.ಮೋನಪ್ಪ ಪೂಜಾರಿ ಕಂಡೆತ್ಯಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ಚಂದ್ರಶೇಖರ್ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.