ಸುದ್ದಿ ಬಿಡುಗಡೆ ವರದಿಗಾರ ಈಶ್ವರ ಪಿ.ಎಚ್ ರವರ ತಾಯಿ ಡೀಕಮ್ಮ ನಿಧನ

Advt_NewsUnder_1
Advt_NewsUnder_1

ತೋಟತ್ತಾಡಿ: ಇಲ್ಲಿನ ತೋಟತ್ತಾಡಿ ಹೊಸವೊಕ್ಲು ಹೊಸಮನೆ ನಿವಾಸಿ ದಿ|ಚನನ ಗೌಡ ರವರ ಪತ್ನಿ, ಕೃಷಿಕರಾಗಿದ್ದ ಡೀಕಮ್ಮ (92.ವ) ಅವರು ಹೃದಯಾಘಾತಕ್ಕೊಳಗಾಗಿ ಆ. 19 ರಂದು ಸ್ವಗೃಹದಲ್ಲಿ ನಿಧನರಾದರು.

ಅಲ್ಪ ಕಾಲದಿಂದ ವಯೋಸಹಜ ಅನಾರೋಗ್ಯಕ್ಕೊಳಗಾಗಿದ್ದ ಅವರಿಗೆ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಲಾಗಿತ್ತು. ಅದಾದ ಬಳಿಕ ಚೇತರಿಸಿಕೊಂಡಿದ್ದ ಅವರು ಮನೆಗೆ ಮರಳಿದ ನಂತರದ ದಿನಗಳಲ್ಲಿ ಮಕ್ಕಳ ಮನೆಗಳಿಗೂ ಹೋಗಿ ಕೆಲ ದಿನ ತಂಗಿ ಬಂದಿದ್ದರು. ಆ. 19 ರಂದು ಮದ್ಯಾಹ್ನದ ವೇಳೆ ಮನೆ ಮಂದಿಯೊಂದಿಗೆ ಮಾತನಾಡುತ್ತಿದ್ದಂತೆ ಒಮ್ಮೆಗೇ ಹೃದಹಾಘಾತಕ್ಕೊಳಗಾಗಿ ಕೊನೆಯುಸಿರೆಳೆದರು.
ಮೃತರು ಪುತ್ರರಾದ ತುಂಗಯ್ಯ ಗೌಡ, ಈಶ್ವರ ಗೌಡ ಪಿ.ಎಚ್ , ವಾಸು ಗೌಡ, ಪುತ್ರಿಯರಾದ ಜಾನಕಿ, ಲಲಿತಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ. ಮೃತರ ಪತಿ ಚನನ ಗೌಡ ಮತ್ತು ಓರ್ವ ಪುತ್ರಿ ಕುಸುಮಾವತಿ ಈ ಹಿಂದೆಯೇ ನಿಧನರಾಗಿದ್ದರು.
ಮೃತರ ಮನೆಗೆ ಚಾರ್ಮಾಡಿ ಗ್ರಾ.ಪಂ ಅಧ್ಯಕ್ಷೆ ಶೈಲಜಾ, ಸದಸ್ಯ ಓಬಯ್ಯ, ತಾ.ಪಂ ಸದಸ್ಯ ಕೊರಗಪ್ಪ ಗೌಡ ಅರಣಪಾದೆ ಹಾಗೂ ಸ್ಥಳೀಯ ಸರ್ವಧರ್ಮೀಯರೂ ಭೇಟಿ ನೀಡಿ, ಅಂತಿಮ ದರ್ಶನ ಪಡೆದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.