ಬೆಳ್ತಂಗಡಿ ಬಂಟರ ಸಂಘದಿಂದ ವೈಶಿಷ್ಟ್ಯಪೂರ್ಣ ಕಾರ್ಯಕ್ರಮ

Advt_NewsUnder_1
Advt_NewsUnder_1

ಗುರುವಾಯನಕೆರೆ: ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರು ದ.ಕ ಬಂಟರ ಸಂಘ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ನವೀಕೃತಗೊಂಡ ಭೊಜನ ಶಾಲೆ ಉದ್ಘಾಟನೆ, ಚುನಾಯಿತ ಜನಪ್ರತಿನಿಧಿಗಳಿಗೆ ಗೌರವ ಸಮರ್ಪಣೆ, ಸಾಧಕರಿಗೆ ಅಭಿನಂದನೆ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣಾ ಸಮಾರಂಭವು ಗುರುವಾಯನಕೆರೆ ಬಂಟರ ಭವನದ ಆಶಾ ಪ್ರಕಾಶ್ ಶೆಟ್ಟಿ ಸಭಾಂಗಣದಲ್ಲಿ ಆ. 19 ರಂದು ಜರುಗಿತು.
ಅಧ್ಯಕ್ಷತೆಯನ್ನು ಆತಿಥೇಯ ಬೆಳ್ತಂಗಡಿ ಬಂಟರ ಸಂಘದ ಅಧ್ಯಕ್ಷ ಎಸ್ ಜಯರಾಮ ಶೆಟ್ಟಿ ವಹಿಸಿದ್ದರು. ಉದ್ಘಾಟನೆಯನ್ನು ಮುಂಬಯಿ ಬಂಟರ ಸಂಘದ ಮಾಜಿ ಅಧ್ಯಕ್ಷ ಸಿ.ಎ ಶಂಕರ್ ಶೆಟ್ಟಿ ನೆರವೇರಿಸಿದರು. ವಿದ್ಯಾರ್ಥಿ ವೇತನ ಉದ್ಘಾಟನೆಯನ್ನು ಮುಂಬಯಿ ವಿ.ಕೆ ಇಂಡಸ್ಟ್ರೀಸ್ ಚೇರ್‌ಮೆನ್ ಕೆ.ಎಮ್ ಶೆಟ್ಟಿ ನೆರವೇರಿಸಿದರು. ಬಂಟರ ಸಂಘದ ವಿದ್ಯಾರ್ಥಿ ನಿಧಿ ಸಂಚಾಲಕ ಪ್ರವೀಣ್ ಶೆಟ್ಟಿ, ಭಾಗಿಯಾಗಿದ್ದರು.
ಸಮಾರಂಭದಲ್ಲಿ ಬೆಳ್ತಂಗಡಿ ಬಂಟರ ಸಂಘದ ವಿದ್ಯಾರ್ಥಿನಿಧಿ ಸಂಚಾಲಕ ಜಯಂತ ಶೆಟ್ಟಿ ಕುಂಟಿನಿ, ಸಂಘದ ಕಾರ್ಯದರ್ಶಿ ಕೆ ವಿಠಲ ಶೆಟ್ಟಿ, ಕೋಶಾಧಿಕಾರಿ ಟಿ ಕೃಷ್ಣ ರೈ, ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ನೊಚ್ಚ, ಜೊತೆ ಕಾರ್ಯದರ್ಶಿ ವಸಂತ ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಏಣಿಂಜ, ನಿಕಟಪೂರ್ವ ಅಧ್ಯಕ್ಷ ಸುರೇಶ್ ಶೆಟ್ಟಿ ಲಾಯಿಲ, ಮಹಿಳಾ ವಿಭಾಗದ ಅಧ್ಯಕ್ಷೆ ಪದ್ಮಲತಾ ಎನ್ ರೈ, ಕಲ್ಯಾಣನಿಧಿ ಸಂಚಾಲಕ ಉಮೇಶ್ ಶೆಟ್ಟಿ ಉಜಿರೆ, ಟಿ. ಅರ್ ಅಡ್ಯಂತಾಯ, ಎಂ.ಜಿ ಶೆಟ್ಟಿ, ರಾಜು ಶೆಟ್ಟಿ ಬೆಂಗತ್ಯಾರು, ರವೀಂದ್ರ ಶೆಟ್ಟಿ ಬಳೆಂಜ, ಜಯರಾಮ ಶೆಟ್ಟಿ ಧರ್ಮಸ್ಥಳ ಮೊದಲಾದ ಸಂಘಟಕರು,ಆಡ್ಯ ಗಣ್ಯರುಗಳು ಭಾಗಿಯಾಗಿದ್ದರು.
ಬಂಟ ಸಮಾಜದ 150 ಆಯ್ದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಪ್ರೋತ್ಸಾಹ ನಿಧಿ ವಿತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.