ಕೊಲ್ಲಿ ದುರ್ಗಾದೇವಿ ದೇಗುಲದಲ್ಲಿ ಕೊಪ್ಪರಿಗೆ ಏರುವ ಕಾರ್ಯಕ್ರಮ

ಮಿತ್ತಬಾಗಿಲು: ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಆ.17 ರ ಸಿಂಹ ಸಂಕ್ರಮಣದಂದು ಕೊಪ್ಪರಿಗೆ ಏರುವ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭದಲ್ಲಿ ಅನಂತರಾಮ್ ಚಾರ್ಮಾಡಿ ಕುಟುಂಬಸ್ಥರು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಂಜುನಾಥ ಕಾಮತ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ದಾಸಪ್ಪ ಗೌಡ, ಸಮಿತಿ ಸದಸ್ಯರಾದ ಕೃಷ್ಣಪ್ಪ ಪೂಜಾರಿ ಕಿಲ್ಲೂರು, ಪೂವಪ್ಪ ಗೌಡ, ಲಕ್ಷ್ಮಣ ಗೌಡ, ಅಣ್ಣಿ ಕುಲಾಲ್, ಶೇಷಮ್ಮ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಸಿಂಹ ಸಂಕ್ರಮಣದ ಅಂಗವಾಗಿ ವಿಶೇಷ ಪೂಜೆ ಇದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀದೇವಿಯ ಕೃಪೆಗೆ ಪಾತ್ರರಾದರು.
ಈಗಾಗಲೇ ಶಿಲಾಮಯ ಗರ್ಭಗುಡಿಯ ಕೆಲಸಗಳು ತ್ವರಿತಗತಿಯಲ್ಲಿ ಆರಂಭಗೊಂಡಿದ್ದು, ಶ್ರೀ ದುರ್ಗಾದೇವಿಯ ಸಾನಿಧ್ಯ ನಿರ್ಮಾಣದ ಕಾರ್ಯಗಳು ನಡೆಯುತ್ತಿದೆ. ಶಿಲ್ಪಶಾಸ್ತ್ರ ಪ್ರಕಾರ ಕಟ್ಟಲು ಮುನ್ನುಡಿ ಇಡುವ ಕೆಲಸ ಆರಂಭವಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.