ನೆರೆ ಸಂತ್ರಸ್ತರಿಗೆ ಕೆ.ಎಸ್.ಎಂ.ಸಿ.ಎ ವತಿಯಿಂದ ಪರಿಹಾರ ಸಾಮಾಗ್ರಿ ರವಾನೆ.

ಬೆಳ್ತಂಗಡಿ: ಕೇರಳ ಹಾಗೂ ಕೊಡಗಿನಲ್ಲಿ ಪ್ರವಾಹದಿಂದ ಸಂತ್ರಸ್ತರಾಗಿರುವ ಜನರಿಗೆ ಬೆಳ್ತಂಗಡಿ ಧರ್ಮಪ್ರಾಂತ್ಯದ ಸಂಘಟನೆಯಾಗಿರುವ ಕೆ.ಎಸ್.ಎಂ.ಸಿ.ಎ ವತಿಯಿಂದ ಸಂಗ್ರಹಿಸಲಾಗಿದ್ದ ಪರಿಹಾರ ಸಾಮಾಗ್ರಿಗಳನ್ನು ಸಾಗಿಸುವ ವಾಹನಗಳಿಗೆ ಬೆಳ್ತಂಗಡಿಯ ಸೈಂಟ್ ಲಾರೆನ್ಸ್ ಪ್ರಧಾನ ದೇವಾಲಯದ ಮುಂಭಾಗದಲ್ಲಿ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಅ.ವಂ ಲಾರೆನ್ಸ್ ಮುಕ್ಕುಯಿರವರು ಆ.19 ರಂದು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಬೆಳ್ತಂಗಡಿ ಸಿರೋ ಮಲಬಾರ್ ಕೆಥೋಲಿಕ್ ಧರ್ಮಪ್ರಾಮತ್ಯದ ಕೆ.ಎಸ್.ಎಂ.ಸಿ.ಎ ಸಂಘಟನೆಯ ವತಿಯಿಂದ ಕೊಡಗು ಜಿಲ್ಲೆಯ ಸಂತ್ರಸ್ತರಿಗಾಗಿ ಈಗಾಗಲೇ ಆಹಾರ ಹಾಗೂ ಇತರೆ ಸಾಮಾಗ್ರಿಗಳನ್ನು ನೀಡಲಾಗಿದ್ದು, ಇದೀಗ ಕೇರಳದ ಸಂತ್ರಸ್ತರಿಗಾಗಿ ಸುಮಾರು 30 ಲಕ್ಷಕ್ಕೂ ಹೆಚ್ಚು ಮೌಲ್ಯದ ಆಹಾರ ಪದಾರ್ಥಗಳು ಹಾಗೂ ಬಟ್ಟೆ ಸೋಪು ಇತ್ಯಾದಿ ವಸ್ತುಗಳನ್ನು ಸಂಗ್ರಹಿಸಲಾಗಿರುವುದಾಗಿ ತಿಳಿಸಿದರು. ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಅದನ್ನು ಇಲ್ಲಿ ಎಲ್ಲರೂ ಸೇರಿ ಮಾಡಿದ್ದಾರೆ ಎಂದರು.
ಇಲ್ಲಿಂದ ಸಂಗ್ರಹಿಸಲಾಗಿರುವ ಸಾಮಾಗ್ರಿಗಳನ್ನು ಏಳು ಲಾರಿಗಳಲ್ಲಿ ತುಂಬಲಾಗಿದ್ದು ಈ ವಾಹನಗಳು ಆ.19 ರಂದು ಕೇರಳದ ವಯನಾಡಿಗೆ ಹೊರಟಿತು. ಈ ಸಂದರ್ಭದಲ್ಲಿ ಕೆ.ಎಸ್.ಎಂ.ಸಿ.ಎ ಕೇಂದ್ರೀಯ ಸಮಿತಿ ಅಧ್ಯಕ್ಷ ಸೆಬಾಸ್ಟಿಯನ್ ಕೆ.ಕೆ, ಸಂಚಾಲಕ ಫಾ| ಬಿನೋಯಿ ಜೋಸೆಫ್, ಫಾ| ಟೀಮಿ ಕಳ್ಳಿಕಾಟ್, ಫಾ| ವರ್ಕಿ ಮಾಳಿಗಯಿಲ್, ಸಂಘಟನೆಯ ಮುಖಂಡ ವಿ.ಟಿ ಸೆಬಾಸ್ಟಿಯನ್, ಪ್ರದೀಪ್ ಕೆ.ಸಿ, ಅಶ್ವತ್ಥ್ ಸೆಬಾಸ್ಟಿಯನ್ ಉಪಸ್ಥಿತರಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.