ಯಕ್ಷಭಾರತಿ 4ನೇ ವಾರ್ಷಿಕೋತ್ಸವ

Advt_NewsUnder_1
Advt_NewsUnder_1

ಉಜಿರೆ: ಉಜಿರೆಯಲ್ಲಿ ಯಕ್ಷಗಾನ ಕಲಿಕೆ, ಮುಮ್ಮೇಳ ಹಾಗೂ ನಾಟ್ಯಕೇಂದ್ರಗಳಿಂದ ಯುವ ಪೀಳಿಗೆ ಕಲೆಯ ಅಭ್ಯಾಸ ನಡೆಸಿ, ಯಕ್ಷಗಾನದ ತವರೊರೆನಿಸಿ ಅದರ ಕಂಪನ್ನು ನಿರಂತರ ಆಸ್ವಾದಿಸುತ್ತಿದ್ದೇವೆ. ದೇವರ ಅನುಗ್ರಹ ಹಾಗೂ ನಮ್ಮೆಲ್ಲರ ಅಭಿಮಾನದಿಂದ ಯುವ ಕಲಾವಿದರು ಬೆಳಕಿಗೆ ಬರುತ್ತಿದ್ದಾರೆ. ಯಕ್ಷಗಾನ ಕಲಿಕೆಗೆ ಉತ್ತಮ ಪ್ರೋತ್ಸಾಹ ದೊರೆಯುತ್ತಿದ್ದು ಯಕ್ಷಗಾನದ ಅಭಿವೃದ್ಧಿಗೆ ಪೂರಕವಾಗಿ ಕಲೆ ಹಾಗೂ ಕಲಾವಿದರನ್ನು ಬೆಳೆಸಬೇಕೆಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯ ರಾಘವ ಪಡ್ವೆಟ್ನಾಯರು ನುಡಿದರು. ಆ. 12 ರಂದು ಉಜಿರೆ ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ ಶ್ರೀ ಜನಾರ್ದನ ದೇವಸ್ಥಾನದ ಆಶ್ರಯದಲ್ಲಿ ಕನ್ಯಾಡಿ ಸೇವಾ ಭಾರತಿಯ ಅಂಗಸಂಸ್ಥೆ ಯಕ್ಷಭಾರತಿಯ 4ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ, ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿ ಉಜಿರೆ ಎಸ್.ಡಿ.ಎಂ ಕಾಲೇಜು ಪ್ರಾಚಾರ್ಯ ಪ್ರೊ. ಟಿ.ಎನ್ ಕೇಶವ ಕರಾವಳಿಯ ಯಕ್ಷಗಾನ ಕಲೆ ಸಾಂಸ್ಕೃತಿಕ ಕ್ಷೇತ್ರದ ಶಕ್ತಿಯುತ ಮಾಧ್ಯಮ. ಹೊಸ ತಲೆಮಾರಿನ ಯುವಕರು ಪ್ರಭಾವಿ ಯಕ್ಷಗಾನ ಕಲೆಯತ್ತ ಆಕರ್ಷಿತರಾಗಿ ಕಂಪನ್ನು ಎಲ್ಲೆಡೆ ಪಸರಿಸಲಿ ಎಂದರು. ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ಸುಂದರ ದೇವಾಡಿಗ ಧರ್ಮಸ್ಥಳ, ವೆಂಕಟೇಶ ಬಾಳ್ತಿಲ್ಲಾಯ ಕೊಕ್ಕಡ ಮತ್ತು ನಾರಾಯಣ ಆಚಾರ್ಯ ಗೇರುಕಟ್ಟೆಯವರನ್ನು ಶಾಲು, ಸ್ಮರಣಿಕೆ, ಸನ್ಮಾನಪತ್ರ ನೀಡಿ ಪುರಸ್ಕರಿಸಲಾಯಿತು. ಯಕ್ಷಗಾನ ಅಭ್ಯಾಸ ನಡೆಸುತ್ತಿರುವ ಕಾಲೇಜು ವಿದ್ಯಾರ್ಥಿಗಳಾದ ಸತೀಶ ಜಿ ಚಿಬಿದ್ರೆ, ಸುಚಿತ್ರಾ ಚಾರ್ಮಾಡಿ, ಲಲಿತಾ ಲಾಯಿಲ ಮತ್ತು ದಿವ್ಯಾ ಗರ್ಡಾಡಿಯವರಿಗೆ ತಲಾ ರೂ. 5000/- ನೆರವಿನ ವಿದ್ಯಾನಿಧಿ ವಿತರಿಸಲಾಯಿತು. ವಿದ್ಯಾನಿಧಿ ಪಡೆದವರ ಪರವಾಗಿ ಸತೀಶ ಜಿ. ಕೃತಜ್ಞತೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಪುತ್ತೂರಿನ ವಾಸ್ತುತಜ್ಞ ಜಗನ್ನಿವಾಸ ರಾವ್, ಧರ್ಮಸ್ಥಳ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹರಿದಾಸ ಗಾಂಭೀರ ಉಪಾಧ್ಯಕ್ಷ ಶ್ರೀಪತಿ ಹೆಬ್ಬಾರ್, ಸೇವಾ ಭಾರತಿ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ್, ಬೆಳ್ತಂಗಡಿ ಉದ್ಯಮಿ ಜಯಕುಮಾರ್ ಉಪಸ್ಥಿತರಿದ್ದರು. ಹರಿದಾಸ ಗಾಂಭೀರ ಸನ್ಮಾನಿತರನ್ನು ಅಭಿನಂದಿಸಿ, ಶಶಿಧರ ಕನ್ಯಾಡಿ ಸನ್ಮಾನ ಪತ್ರ ವಾಚಿಸಿದರು. ಸಮ್ಮಾನಿತರ ಪರವಾಗಿ ವೆಂಕಟೇಶ ಬಾಳ್ತಿಲ್ಲಾಯ ಅನಿಸಿಕೆ ವ್ಯಕ್ತ ಪಡಿಸಿದರು. ಸೇವಾಭಾರತಿ ಕಾರ್ಯದರ್ಶಿ ವಿನಾಯಕರಾವ್ ಕನ್ಯಾಡಿ ಮತ್ತು ಯಕ್ಷಭಾರತಿ ಸಂಚಾಲಕ ಮಹೇಶ ಕನ್ಯಾಡಿ ಕಾರ್ಯಕ್ರಮ ಸಂಯೋಜಿಸಿದ್ದರು. ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ವಾರ್ಷಿಕ ವರದಿ ಮಂಡಿಸಿ, ಕಾರ್ಯಕ್ರಮ ನಿರೂಪಿಸಿ, ಸದಸ್ಯರಾದ ವಿಷ್ಣು ಮರಾಠೆ ವಂದಿಸಿದರು.
ಯಕ್ಷಭಾರತಿ ಮಹಿಳಾ ತಂಡದಿಂದ ಕಾವಶ್ರೀ ಅಜೇರು ಹಾಡುಗಾರಿಕೆಯಲ್ಲಿ ಕಚದೇವಯಾನಿ ಪ್ರಸಂಗದ ಯಕ್ಷಗಾನ ತಾಳಮದ್ದಳೆ ಹಾಗೂ ಮಹೇಶ ಕನ್ಯಾಡಿ ಹಾಡುಗಾರಿಕೆಯಲ್ಲಿ ಹಿರಿಯ ಕಲಾವಿದರಿಂದ ರತ್ನ ಪ್ರಭಾ ಪ್ರಸಂಗದ ಯಕ್ಷಗಾನ ಪ್ರದರ್ಶಿಲ್ಪಟ್ಟಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.