ಮರೋಡಿ ಉಮಾಮಹೇಶ್ವರ ದೇವಸ್ಥಾನದ ಸಭಾಂಗಣದಲ್ಲಿ  ಆಟಿಡೊಂಜಿ ದಿನ.

Advt_NewsUnder_1
Advt_NewsUnder_1

ಮರೋಡಿ: ಉಮಾಮಹೇಶ್ವರ ದೇವಸ್ಥಾನ ಮರೋಡಿ ಮತ್ತು ಉಮಾಮಹೇಶ್ವರ ಯಂಗ್‌ ಸ್ಟಾರ್‌ ಫ್ರೆಂಡ್ಸ್‌ ಇದರ ಆಶ್ರಯದಲ್ಲಿ ದೇವಸ್ಥಾನದ ಸಭಾಭವನದಲ್ಲಿ ಆ.12 ರಂದು ಆಟಿಡೊಂಜಿ ದಿನ ಕಾರ್ಯಕ್ರಮ ಜರುಗಿತು.
ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾದ ವಿಜಯ ಆರಿಗ ನಿಡ್ಡಾಜೆ ಕಾರ್ಯಕ್ರಮದ ಉದ್ಘಾಟಣೆಯನ್ನು ನೆರವೇರಿಸಿದರು. ಕೇಳ ಮಾಗಣೆ ಬಸದಿಯ ಆಡಳಿತ ಮೊಕ್ತೇಸರ ಡಾ.ಆಶೀರ್ವಾದ್‌ ,  ಉದ್ಯಮಿ ರತ್ನಾಕರ ಬುಣ್ಣಾನ್‌, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಗಿರೀಶ್‌ ಕುಮಾರ್‌, ಪತ್ರಕರ್ತ ಪ್ರದೀಶ್‌ ಮರೋಡಿ, ಪ್ರಗತಿಪರ ಕೃಷಿಕ ಅರುಣ್‌ ಪಿರೇರಾ, ಸಂಘಟನೆಯ ಅಧ್ಯಕ್ಷ ವಿದ್ಯಾನಂದ ಪೂಜಾರಿ, ಕಾರ್ಯದರ್ಶಿ ಸುಜಿತ್‌ ಹೆಗ್ಡೆ ಉಪಸ್ಥಿತರಿದ್ದರು.
ಅತಿಥಿಗಳು ಚೆನ್ನೆಮಣೆ ಆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೆಳಿಗ್ಗೆ ಉಪಾಹಾರಕ್ಕೆ ಮತ್ತು ಮಧ್ಯಾಹ್ನ ಭೋಜನಕ್ಕೆ ಆಟಿಯ ವಿಶೇಷ ಖಾದ್ಯ ವಿತರಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ಮಕ್ಕಳು, ವೃದ್ಧರು ಸೇರಿದಂತೆ ಎಲ್ಲ ವಯೋಮಾನದವರು ಉತ್ಸಾಹದಿಂದ ಪಾಲ್ಗೊಂಡರು.
ಮುದ್ದುಕೃಷ್ಣ, ಭಕ್ತಿಗೀತೆ, ಜುಬುಲಿ, ಛದ್ಮವೇಷ, ರಸಪ್ರಶ್ನೆ, ಮಡಿಕೆ ಒಡೆಯುವುದು, ಎಲೆ ಗುರುತಿಸುವಿಕೆ, ಪಾಡ್ದನ ಹಾಡುವುದು, ಮದಿಪು ಹೇಳುವುದು, ಹಾರೆ ಒತ್ತುವುದು, ಅವಲಕ್ಕಿ ತಿನ್ನುವುದು, ದಂಪತಿ ಸ್ಪರ್ಧೆ ಸೇರಿದಂತೆ ಹಲವು ಸ್ಪರ್ಧೆಗಳು ನಡೆಯಿತು.

ಸಮಾರೋಪ: ಸಂಜೆ ನಡೆದ ಸಮಾರೋಪದಲ್ಲಿ ಸಂಘಟನೆಯ ಗೌರವಾಧ್ಯಕ್ಷ ಯಶೋಧರ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್‌, ಮರೋಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಲಕೃಷ್ಣ ಬಂಗೇರ, ವೇಣೂರು ಪ್ರಖಂಡದ ಬಜರಂಗದಳದ ಸಂಚಾಲಕ ರಾಮ್‌ಪ್ರಸಾದ್‌, ನವೀನ್‌ ಕೋಟ್ಯಾನ್‌ ಮರೋಡಿ, ವಿದ್ಯಾನಂದ ಪೂಜಾರಿ ಇದ್ದರು. ಶಿಕ್ಷಕರಾದ ಸುಫಲಾ ಎಂ.ಎಸ್‌, ಸುಕೇಶ್‌ ಕುಮಾರ್‌, ಮೋಹನ್‌ ಮರೋಡಿ, ಸದಾಶಿವ ಹೆಗ್ಡೆ ಸಹಕರಿಸಿದರು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಗೌರವ ಸಲಹೆಗಾರರಾದ ಶುಭರಾಜ ಹೆಗ್ಡೆ ಸ್ವಾಗತಿಸಿ, ದಿನೇಶ್‌ ಬುಣ್ಣಾನ್‌ ಕಾರ್ಯಕ್ರಮ ನಿರೂಪಿಸಿದರು. ಸುಜಿತ್‌ ಹೆಗ್ಡೆ ಬಹುಮಾನ ವಿಜೇತರ ವಿವರ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.