ಅಳದಂಗಡಿಯಲ್ಲಿ ತುಳುಕೂಟ-2018 ಕಾರ್ಯಕ್ರಮ

Advt_NewsUnder_1
Advt_NewsUnder_1

ಅಳದಂಗಡಿ : ನಮ್ಮ ತಾಯಿಯಂತೆ ನಮ್ಮ ಮಾತೃಭಾಷೆಯಾಗಿದ್ದು ತುಳುನಾಡಿನ ಆಚರಣೆಗಳು ಇಡೀ ನಾಡಿಗೆ ಮಾದರಿ ತುಳು ನಮ್ಮ ನಾಡಿ ಮಿಡಿತ ಎಂದು ರಾಷ್ಟೀಯ ಪುರಸ್ಕಾರ ಪಡೆದ ಪಂಚಮಿ ಮಾರೂರು ಹೇಳಿದರು.ಅವರು ಆ.5 ರಂದು ಅಳದಂಗಡಿ ಅರಮನೆ ನಗರಿಯ ಶ್ರೀ ಸೋಮನಾಥೇಶ್ವರೀ ದೇವಸ್ಥಾನದಲ್ಲಿ ಆಮಂತ್ರಣ ಪರಿವಾರದ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಅಳದಂಗಡಿ, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ತಂಗಡಿ, ಸೌತ್ ಕೆನರ ಪೊಟೊ ಗ್ರಾಫರ್ ಅಸೋಸಿಯೇಷನ್ ಬೆಳ್ತಂಗಡಿ ವಲಯ, ರುಧಿರಾ ಫಿಲಂಸ್ ಮಂಗಳೂರು ಮತ್ತು ಬೀಟ್ ರಾಕರ್ಸ್ ಡ್ಯಾನ್ಸ್ ಅಕಾಡೆಮಿ ಬೆಳ್ತಂಗಡಿ ಹಾಗೂ ಮಂಜುಶ್ರೀ ಜೇಸಿ ಬೆಳ್ತಂಗಡಿ ಇವರ ಪ್ರಾಯೋಜಕತ್ವದಲ್ಲಿ ನಡೆದ ತುಳುಕೂಟ 2018 ಇದರ ಉದ್ಘಾಟನೆಯನ್ನು ನೆರವೇರಿಸಿ ಮಾತಾನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಅಳದಂಗಡಿ ಅರಮನೆಯ ಶಿವಪ್ರಸಾದ ಅಜಿಲರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಲಾಯಿಲ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಲ| ಪಿ.ಹೆಚ್.ಪ್ರಕಾಶ್ ಶೆಟ್ಟಿ, ತುಳು ಅಕಾಡೆಮಿ ಸದಸ್ಯೆ ವಿದ್ಯಾಶ್ರೀ ಉಳ್ಳಾಲ್,ತುಮಕೂರು ಮಧುಗಿರಿಯ ಕೃಷ್ಣಮೂರ್ತಿ, ಅಳದಂಗಡಿ ಗ್ರಾಮ ಪಂಚಾಯತು ಅಧ್ಯಕ್ಷ ಲ| ಸತೀಶ್ ಕುಮಾರ್ ಬೆಳ್ತಂಗಡಿ ತುಳುನಾಡ ಒಕ್ಕೂಟ ಅಧ್ಯಕ್ಷ ವಿನ್ಸೆಂಟ್‌ , ಉಡುಪಿ ಜಿಲ್ಲಾ ಪತ್ರಕರ್ತರ ವೇದಿಕೆಯ ಅಧ್ಯಕ್ಷ ಶೇಖರ ಅಜೆಕಾರು, ಅಳದಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲ| ಸುಕೇಶ್ ಜೈನ್, ಪೊಟೊ ಗ್ರಾಫರ್ ಸಂಘದ ಅಧ್ಯಕ್ಷ ಕಿರಣ್ ಕುಮಾರ್, ಬೀಟ್ ರಾಕರ್ಸ್ ಮಾಲಕ ಜಿತೇಶ್ ಬೆಳ್ತಂಗಡಿ, ರುಧಿರ ಫಿಲಂಸ್ ಇದರ ಗಣಿದೇವ್ ಕಾರ್ಕಳ ಮತ್ತು ಸುಹಾನ್ ರೈ, ಸದಾನಂದ ಪೂಜಾರಿ ಉಂಗಿಲಬೈಲ್ ಉಪಸ್ಥಿತರಿದ್ದರು.
ಈ ಸಂದರ್ಭ ಪಡಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿ ನೇಮಕ ಗೊಂಡ ಅಳದಂಗಡಿ ಪ್ರತೀತ್ ಅಜಿಲ ಅವರನ್ನು ಗೌರವಿಸಲಾಯಿತು.
ಮತ್ತು ವಿವಿಧ ಕ್ಷೇತ್ರಗಳಲ್ಲಿ ತುಳು ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಬಂದ ಹಲವಾರು ಪ್ರಮುಖರನ್ನು, ಜಿಲ್ಲೆಯ ರಾಜ್ಯದ ತಾಲೂಕಿನ ವಿವಿಧ 100 ಕ್ಕಿಂತಲೂ ಹೆಚ್ಚಿನ ಪ್ರತಿಭೆಗಳನ್ನು, ತುಳುಚಿತ್ರರಂಗದವರನ್ನು, ಸಾಹಿತಿಗಳನ್ನು, ಯಕ್ಷಗಾನ, ನಾಟಕ ಕಲಾವಿದರನ್ನು ಸನ್ಮಾನಿಸಲಾಯಿತು.
ಸನ್ಮಾನ
ಸಮಾರಂಭದಲ್ಲಿ ಆಮಂತ್ರಣ ಪರಿವಾರದ ಗೌರವ ಸಲಹೆಗಾರ ಹಾಗೂ ಬೆಳ್ತಂಗಡಿ ಜನಪ್ರಿಯ ಶಾಸಕ ಹರೀಶ್ ಪೂಂಜಾ ಅವರನ್ನು ಸನ್ಮಾನಿಸಲಾಯಿತು.
ಚಿತ್ರ ನಿರ್ದೇಶಕ ಸೂರಜ್ ಶೆಟ್ಟಿ, ನಟ ಮಂಜುರೈ, ಸೂರಜ್ ಸನಿಲ್, ಮಣಿಕೋಟೆಬಾಗಿಲು, ಲತೀಪ್ ಸಾಣೂರು,ಹರಿಶ್ಚಂದ್ರ ಪೆರಾಡಿ , ಪೂರ್ವಿ.ಕೆ.ರಾವ್, ಶ್ರೇಯಾ ದಾಸ್, ಕಟಕ ಚಿತ್ರದ ಶ್ಲಾಘ ಸಾಲಿಗ್ರಾಮ, ಮಜಾಭಾರತ ಕಲಾವಿದರಾದ ಆರಾಧನ ಭಟ್, ಅತೀಶ್ ಶೆಟ್ಟಿ, ಸೃಷ್ಟಿ ಕಾರ್ಕಳ , ಚಿತ್ರಕಲಾವಿದೆ ಸ್ವಾತೀ ಕುಲಾಲ್, ಡ್ರಾಮ ಜೂನಿಯರ್ ಆದಿತ್ಯ, ಸಂಸ್ಕೃತ ಸಿರಿಯ ಕೀಶೋರ್ ಹಾಗೂ ನೂರಾರು ಕಲಾವಿದರು ಭಾಗವಹಿಸಿದ್ದರು.

ಆಮಂತ್ರಣ ಸಂಸ್ಥೆಯ ನಿರ್ದೇಶಕ ವಿಜಯ ಕುಮಾರ್ ಜೈನ್ ಕಾರ್ಯಕ್ರಮ ನಿರ್ವಹಿಸಿದರು. ಧನರಾಜ ಆಚಾರ್ಯ ಬೆಳ್ತಂಗಡಿ, ಚೈತ್ರಾ ಅಡಿಗ, ಹರೀಶ ಆಚಾರ್ಯ, ರಮೇಶ ಹೆಗ್ಡೆ, ಕೃಷ್ಣಪ್ಪ ಪೂಜಾರಿ ಬಿಕ್ಕಿರ, ಸುಂದರ ಅರ್ಕಿಜೆ, ಸುಪ್ರೀತ್ ಜೈನ್, ದರ್ಶನ್ ಶೆಟ್ಟಿ, ಸಂದೀಪ್ ನೀರಲ್ಕೆ, ಚಿರಾಗ್ ಶೆಟ್ಟಿ ಸಹಕರಿಸಿದರು.
ಲ| ಸದಾನಂದ ಕುದ್ಯಾಡಿ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಬೆಳ್ತಂಗಡಿಗೆ ಬೀಟ್ ರಾಕರ್ಸ್ ಡ್ಯಾನ್ಸ್ ಇವರಿಂದ ತುಳುನಾಡ ವೈಭವ ಜರಗಿತು. ಸಾರ್ವಜನಿಕ ಪುರುಷರಿಗಾಗಿ ಕೊತ್ತಲಿಗೆ ಕ್ರಿಕೆಟ್, ಕುಟ್ಟಿದೊಣ್ಣೆ, ಲಗೋರಿ ಆಟಗಳು ನಡೆದವು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.