HomePage_Banner_
HomePage_Banner_
HomePage_Banner_

ಧರ್ಮಸ್ಥಳದಲ್ಲಿ ಕರ್ನಾಟಕ ರಾಜ್ಯ ಎಂಜಿನಿಯರ್‌ಗಳ ಸಂಘದ ಕಾರ್ಯಕಾರಿ ವಿಶೇಷ ಸಭೆ

Advt_NewsUnder_1

ಧರ್ಮಸ್ಥಳ:  ಕರ್ನಾಟಕ ರಾಜ್ಯದ ಎಂಜಿನಿಯರ್‌ಗಳ ಸಂಘದ ಆರನೇ ಕಾರ್ಯಕಾರಿ ವಿಶೇಷ ಸಭೆಯು ಆ. 12 ರಂದು ಧರ್ಮಸ್ಥಳದ ಮಹೋತ್ಸವ ಸಭಾ ಭವನದಲ್ಲಿ ಜರುಗಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು.

ವೇದಿಕೆಯಲ್ಲಿ ನಿವೃತ್ತ ಎಂಜಿನಿಯರ್ ಕಲ್ಲಪ್ಪ , ಎಂಜಿನಿಯರ್‌ಗಳ ಸಂಘದ ಅಧ್ಯಕ್ಷ ಡಿ.ಎಸ್. ದೇವರಾಜ್, ಎಂಜಿನಿಯರ್‌ಗಳ ಸಂಘದ ಪದಾಧಿಕಾರಿಗಳಾದ ಕಾಂತರಾಜ್, ಚಿನ್ನೇಗೌಡ, ಎಸ್.ಎಂ. ಮೇಟಿ, ಎಚ್.ಕೆ. ಕಲ್ಲಪ್ಪ ಮತ್ತು ಯಶವಂತ ಮತ್ತು ಇತರರು ಉಪಸ್ಥಿತರಿದ್ದರು.
ಬೆಳ್ತಂಗಡಿ ಲೋಕೋಪಯೋಗಿ ಇಲಾಖಾ ಉಪವಿಭಾಗದ ಪ್ರಭಾರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಪ್ರಸಾದ ಅಜಿಲ ಸ್ವಾಗತಿಸಿದರು. ಉಡುಪಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ ಧನ್ಯವಾದವಿತ್ತರು. ತನ್ನ ಪಟ್ಟಾಭಿಷೇಕದ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಡಾ. ಹೆಗ್ಗಡೆಯವರನ್ನು ಈ ಸಂದರ್ಭ ಎಂಜಿನಿಯರ್‌ಗಳ ಸಂಘದ ವತಿಯಿಂದ ಸನ್ಮಾನಿಸಲಾಯಿತು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.