HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಮೈಸೂರಿನಲ್ಲಿ ಕೊಲೆ, ಮಾನಭಂಗ ಯತ್ನ ಪ್ರಕರಣದ ಆರೋಪಿ ಪಟ್ರಮೆಯಲ್ಲಿ ಪೊಲೀಸ್ ಬಲೆಗೆ

ಪಟ್ರಮೆ: ಮೈಸೂರು ನಗರದ ದೇವರಾಜ ಪೊಲೀಸ್ ಠಾಣಾ ಸರಹದ್ದಿನಲ್ಲಿ ನಡೆದಿದ್ದ ಅಪರಾಧ ಪ್ರಕರಣವೊಂದರ ಆರೋಪಿಯನ್ನು ಬೆಳ್ತಂಗಡಿ ತಾಲೂಕು ಪಟ್ರಮೆ ಗ್ರಾಮದಲ್ಲಿ ಉಪ್ಪಿನಂಗಡಿ ಠಾಣಾ ಎಸ್‌ಐ ನಂದ ಕುಮಾರ್ ನೇತೃತ್ವದ ತಂಡ ಬಂಧಿಸಿ ಮೈಸೂರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಬಂಧಿತರನ್ನು ಬಂಟ್ವಾಳ ತಾಲೂಕು ಮಾಣಿನಾಲ್ಕೂರು ಗ್ರಾಮದ ಅಜಿಲಮೊಗರು ನೆಲ್ಲಿಪಲಿಕೆ ನಿವಾಸಿ ಮುಹಮ್ಮದ್ ಅಲ್ತಾಫ್ (23 ವ.) ಎಂಬವರೆಂದು ಗುರುತಿಸಲಾಗಿದೆ. ಮೈಸೂರಿನ ಕೆ. ಆರ್ ಆಸ್ಪತ್ರೆ ಆವರಣದ ಬಿಎಸ್‌ಸಿ ಶುಶ್ರೋಶಕಿಯರ ವಿದ್ಯಾರ್ಥಿ ನಿಲಯಕ್ಕೆ ಜೂ. 20 ರಂದು ರಾತ್ರಿ 2.00 ಗಂಟೆಗೆ ಆರೋಪಿಯು ಅಕ್ರಮ ಪ್ರವೇಶಿಸಿ ಸೆಕ್ಯೂರಿಟಿ ಗಾರ್ಡ್‌ಗೆ ಚಾಕು ತೋರಿಸಿ ಬೆದರಿಸಿ ಒಳಗೆ ಮಲಗಿದ್ದ ವಿದ್ಯಾರ್ಥಿನಿಗೆ ಬಲಾತ್ಕಾರವಾಗಿ ಲೈಂಗಿಕ ಕಿರುಕುಳ ನೀಡಿ ನಿಲಯದ ಇತರರು ಎಚ್ಚರವಾದಾಗ ಓಡಿ ಹೋಗಿ ತಪ್ಪಿಸಿಕೊಂಡಿದ್ದರು. ಅಲ್ಲಿಂದ ಬಂದವರೇ ಪಟ್ರಮೆ ಗ್ರಾಮದ ಸಂಕೇಶ ಎಂಬಲ್ಲಿ ಕೇರಳದ ಕೊಟ್ಟಾಯಂ ಜಿಲ್ಲೆಯ ಪುದುಪಳ್ಲಿ ಎಂಬಲ್ಲಿಯ ಜಿನುಲಾಲ್ ವಿ.ಸಿ ಎಂಬವರ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡು ತಲೆಮರೆಸಿಕೊಂಡಿದ್ದ ಖಚಿತ ಮಾಹಿತಿಯಂತೆ ಈ ದಾಳಿ ಸಂಘಟಿಸಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.