ಮಡಂತ್ಯಾರು: ನಿವೃತ್ತ ಕನ್ನಡ ಉಪನ್ಯಾಸಕ ಮಧುಕರ ಮಲ್ಯರವರಿಗೆ ವಿದಾಯ ಸಮಾರಂಭ.

ಮಡಂತ್ಯಾರು :ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ನಿವೃತ್ತ ಕನ್ನಡ ಉಪನ್ಯಾಸಕ ಮಧುಕರ ಮಲ್ಯ ರವರಿಗೆ ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ವಿದಾಯ ಸಮಾರಂಭ  ಇತ್ತೀಚೆಗೆ ಜರುಗಿತು.
ಸೇಕ್ರೆಡ್ ಹಾರ್ಟ್ ಚರ್ಚ್ ಧರ್ಮಗುರು ವಂ|ಬೆಸಿಲ್ ವಾಸ್ ಅಧಕ್ಷತೆ ವಹಿಸಿದ್ದರು. ಐಕಳ ಪೊಂಪೈ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮ್ಯಾಥ್ಯೂ ಎನ್.ಎಮ್, ಸೇಕ್ರೆಡ್ ಹಾರ್ಟ್ ಪ.ಪೂ.ಕಾಲೇಜಿನ ಇತಿಹಾಸ ಉಪನ್ಯಾಸಕ ವಿನ್ಸೆಂಟ್‌ ರೊಡ್ರಿಗಸ್, ಭಗಿನಿ ಎಲಿಝಬೆತ್ ಅಗಸ್ಟೀನ್,  ಸೇಕ್ರೆಡ್ ಹಾರ್ಟ್ ಚರ್ಚ್ ನ ಸಹಾಯಕ ಧರ್ಮಗುರುಗಳಾದ ರೆ|ಫಾ|ಆಲ್ವಿನ್ ರಿಚರ್ಡ್ ಡಿಸೋಜ, ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಲಿಯೋ ರೊಡ್ರಿಗಸ್, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಫಿಲಿಪ್ ಡಿಕುನ್ಹ ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು.
ವಿದಾಯ ಸಮಾರಂಭದ ಸನ್ಮಾನ ಸ್ವೀಕರಿಸಿದ ಮಧುಕರ ಮಲ್ಯರು ಮಾತನಾಡಿ “ವಿದ್ಯಾರ್ಥಿಗಳು ಹೆತ್ತವರ ಮಾತನ್ನು ಗೌರವಿಸಬೇಕು.ಪ್ರಾಮಾಣಿಕತೆಯನ್ನು ಬೆಳೆಸಿಕೊಳ್ಳಬೇಕು.ಜೀವನದ್ದುದ್ದಕ್ಕೂ ನಾಲ್ಕು ಮಂದಿಗೆ ಉಪಕಾರ ಮಾಡುವುದೇ ಧರ್ಮ, ಅರ್ಥ,ಕಾಮ,ಮೋಕ್ಷವಾಗಿದೆ. ಸಮಾಜಮುಖಿ ಕೃತಜ್ಞತೆಯನ್ನು ಕೊಡುವುದು ನಿಜವಾದ ಸಂಸ್ಕಾರವಾಗಿದೆ.ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸದಿರಿ ಎಂದು ಹೇಳಿದರು.
ನಲ್ವತ್ತು ವರುಷಗಳ ಸೇವಾವಧಿಯಲ್ಲಿ ಸೇಕ್ರೆಡ್ ಹಾರ್ಟ್ ವಿದ್ಯಾಲಯವು ಸಂತೃಪ್ತಿಯ ಜೀವನವನ್ನು ನೀಡಿದೆ ಎಂದು ಅವರು ತಮ್ಮ ಗತ ವೃತ್ತಿ ಜೀವನದ ಅನುಭವಗಳನ್ನು ಹಂಚಿಕೊಂಡರು.
ಪ್ರಾಂಶುಪಾಲರಾದ ರೆ|ಫಾ|ಜೆರೋಮ್ ಡಿಸೋಜ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು, ವಾಣಿಜ್ಯ ಉಪನ್ಯಾಸಕ ಲಿಯೊ ನರೊನ್ಹಾ ವಂದಿಸಿ, ಉಪನ್ಯಾಸಕಿಯರಾದ ಪ್ರಿಯಾ ಜ್ಯೋತಿ ಕುಟಿನ್ಹಾ, ರೆನಿಶಾ ವೇಗಸ್ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.