HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಮಳೆಯ ಆರ್ಭಟಕ್ಕೆ ನೆರಿಯದಲ್ಲಿ ಭೂ ಕುಸಿತ.

ನೆರಿಯ: ಕಳೆದ ಮೂರು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ನೆರಿಯ ಗ್ರಾಮದ ಗಂಡಿಬಾಗಿಲು ಎಂಬಲ್ಲಿಯ ಪಿಲತ್ತಡಿ ರೆನ್ನಿಯವರ ಮನೆಯ ಹಿಂಬಾಗದಲ್ಲಿ ಭೂಕುಸಿತ ಸಂಭವಿಸಿದ್ದು, ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆ.9 ರಂದು ಮುಂಜಾನೆ  ಭೂ ಕುಸಿತ ಸಂಭವಿಸಿದ್ದು ಮನೆ ಹಾಗೂ ಕೃಷಿ ಭೂಮಿ ಸಂಪೂರ್ಣವಾಗಿ ನಾಶವಾಗಿದೆ. ಮನೆಯಲ್ಲಿದ್ದ ರೆನ್ನಿ ಹಾಗೂ ಅವರ ಪತ್ನಿ ವಿನ್ಸಿ ಅವರ ಮಕ್ಕಳಾಧ ಪ್ರಿಯಾ ಹಾಗೂ ಪ್ರಿನ್ಸ್ ರವರು ಭಾರೀ ಸದ್ದಿಗೆ ಮನೆಯ ಹೊರಗೆ ಓಡಿ ಹೋದುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರೆನ್ನಿಯವರ ತಾಯಿ ಎಪ್ಪತ್ತು ವರ್ಷ ಪ್ರಾಯದ ೇಲಿಯಮ್ಮ ರವರು ಮನೆಯಲ್ಲಿ ಮಂಚದಲ್ಲಿ ಮಲಗಿದ್ದರು. ಅವರು ಮಲಗಿದ್ದ ಕೊಠಡಿಯ ಗೋಡೆಯನ್ನೂ ನೀರು ಕೊಚ್ಚಿಕೊಂಡು ಹೋಗಿದೆ. ಅವರು ಯಾವುದೇ ಅಪಾಯವಿಲ್ಲದೆ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಭಾರೀ ಪ್ರಮಾಣದಲ್ಲಿ ಹರಿದು ಬಂದ ನೀರಿನ ಪ್ರವಾಹ ಮಣ್ಣು ಕಲ್ಲುಗಳು ಅಡ್ಡಲಾಗಿದ್ದ ಮರಗಳನ್ನು ಕೊಚ್ಚಿಕೊಂಡು ಕೆಳಗೆ ಪ್ರವಾಹವಾಗಿ ಹರಿದಿದೆ.

ಶಾಸಕ ಹರೀಶ್ ಪೂಂಜ, ನೆರಿಯ ಗ್ರಾ.ಪಂ ಅಧ್ಯಕ್ಷ ಮಹಮ್ಮದ್, ಗ್ರಾ.ಪಂ  ಸದಸ್ಯರು, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಟಿ.ಸೆಬಾಸ್ಟಿಯನ್ ಸಮಿತಿರಿಯ  ಫಾ| ಶಾಜಿ ಮ್ಯಾಥ್ಯೂ, ಗಂಡಿಬಾಗಿಲು ದೇವಗಿರಿ ಫಾ| ಜೋಸೆಫ್, ಫಾ|ಬಿನೋಯಿ,ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂದನೀಯ ಲಾರೆನ್ಸ್ ಮುಕ್ಕುಯಿ ಮೊದಲಾದರು ಸ್ಥಳಕ್ಕೆ ಭೇಟಿದರು. ಈ ಸಂದರ್ಭದಲ್ಲಿ  ಕೆ.ಎಸ್.ಎಂ.ಸಿ ವತಿಯಿಂದ  ಏಲಿಯಮ್ಮರವರಿಗೆ ತಾತ್ಕಾಲಿಕ ಪರಿಹಾರ ಸಹಾಯಧನ ನೀಡಿದರು ಹಾಗೂ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.