HomePage_Banner_
HomePage_Banner_

ನಿವೃತ್ತ ಸಹಾಯಕ ಕೃಷಿ ನಿರ್ದೇಶಕರಿಗೆ ಬೀಳ್ಕೊಡುಗೆ.

ಬೆಳ್ತಂಗಡಿ: ಕೃಷಿ ಇಲಾಖೆಯಲ್ಲಿ ಸುದೀರ್ಘ 37 ವರ್ಷಗಳ ಸೇವೆ ಸಲ್ಲಿಸಿ ಜು.31 ರಂದು ವಯೋ ನಿವೃತ್ತಿಹೊಂದಿರುವ ಎನ್.ತಿಲಕ್ ಪ್ರಸಾದ್‌ಜೀ ಸಹಾಯಕ ಕೃಷಿ ನಿರ್ದೇಶಕರು ಬೆಳ್ತಂಗಡಿ ತಾಲೂಕು ಇವರ ಶುಭ ವಿದಾಯ ಸಮಾರಂಭದ ಕಾರ್ಯಕ್ರಮವು ಬೆಳ್ತಂಗಡಿ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಜು.31 ರಂದು ಜರುಗಿತು.
ಪುತ್ತೂರು ವಿಭಾಗದ ಉಪ ಕೃಷಿನಿರ್ದೇಶಕ ಶಿವಶಂಕರ್ ಹೆಚ್ ದಾನೇಗೊಂಡರ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕಿ ಶ್ರೀಮತಿ ಪ್ರೇಮ.ಡಿ ಕಾಂಬ್ಳೆ ಮತ್ತು ಕೃಷಿಯಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿರುವ ಪ್ರಭಾಕರಮಯ್ಯ ಭಾಗವಹಿಸಿದ್ದರು.
ಕೊಕ್ಕಡ ಸಹಾಯಕ ಕೃಷಿ ಅಧಿಕಾರಿ ಚಿದಾನಂದ ಎಸ್.ಹೂಗಾರ್ ಸ್ವಾಗತಿಸಿದರು. ಸಮಾರಂಭದ ಕೇಂದ್ರ ಬಿಂದುವಾಗಿರುವ ಎನ್.ತಿಲಕ್ ಪ್ರಸಾದ್‌ಜೀ ರವರ ಕುರಿತಾಗಿ ಎಲ್ಲಾ ಮುಖ್ಯ ಅತಿಥಿಗಳು ಇವರ ಸರಕಾರಿ ಸೇವೆಯ ನಿಷ್ಕಲ್ಮಶ ಸೇವೆಯನ್ನು ಕೊಂಡಾಡಿ, ಅವರ ಸೇವಾತತ್ಪರತೆಯು ಈಗಿನ ಯುವ ನಡುವಿನ ಪೀಳಿಗೆಗೆ ಮಾದರಿಯಾಗಿರಲಿ ಎಂದು ಹಾರೈಸಿದರು. ಇವರು ಇಲಾಖೆ ಮತ್ತು ಸಾರ್ವಜನಿಕರ ನಡುವಿನ ಸಂಬಂಧವನ್ನು ಸೂಜಿಯಂತೆ ಜೋಡಿಸಿ ಕರ್ತವ್ಯನಿರ್ವಹಿಸಿದ್ದು, ಎಲ್ಲಾ ಸರಕಾರಿ ನೌಕರರಿಗೂ ಮಾದರಿಯಾಗಿರುತಾರೆ ಎಂದು ತಿಳಿಸುತ್ತಾ ಅವರಿಗೆ ಹಾಗೂ ಅವರ ಕುಟುಂಬಕ್ಕೆ ಸಕಲ ಅಷ್ಟೈಶ್ವರ್ಯಗಳನ್ನು ಭಗವಂತನು ಕರುಣಿಸಲಿ ಎಂದು ಹಾರೈಸಿದರು.
ಎನ್.ತಿಲಕ್‌ಪ್ರಸಾದ್ ಜೀ ಮತ್ತು ಶ್ರೀಮತಿ ಸುಜಾತಾ ಹಾಗೂ ಅವರ ಪುತ್ರಿ ಈಶಾನಿ ಕುಟುಂಬದವರನ್ನು ಮುಖ್ಯ ಅತಿಥಿಗಳು ಶಾಲುಹೊದಿಸಿ ಫಲ ಪುಷ್ಪಗಳನ್ನಿತ್ತು ಗೌರವಿಸಿದರು.
ಸನ್ಮಾನ ಸ್ವೀಕರಿಸಿದ ಎನ್.ತಿಲಕ್‌ಪ್ರಸಾದ್‌ಜೀ ರವರು ಸನ್ಮಾನಿಸಿದ ಎಲ್ಲಾ ಇಲಾಖಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿ, ತನ್ನ ಸೇವಾ ಅವಧಿಯಲ್ಲಿ ಸೂಕ್ತ ಮಾರ್ಗದರ್ಶನ ನೀಡಿದ ಅಧಿಕಾರಿಗಳನ್ನು, ಸಹಕಾರ ನೀಡಿದ ಎಲ್ಲಾ ಸಿಬ್ಬಂದಿಗಳನ್ನು ಹಾಗೂ ತಾಲೂಕಿನ ರೈತಾಪಿ ಬಂಧುಗಳನ್ನು ಮತ್ತ ವಿವಿಧ ಸಂಘ ಸಂಸ್ಥೆಗಳನ್ನು ಸ್ಮರಿಸುತ್ತಾ ಕೃತಜ್ಞತೆ ಸಲ್ಲಿಸಿದರು.
ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಪಿ.ನಾರಾಯಣ ಪೂಜಾರಿ ಕಾರ್ಯಕ್ರಮ ನಿರ್ವಹಿಸಿ, ವೇಣೂರು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ನಂದನ್ ಶೆಣೈ ಧನ್ಯವಾದವಿತ್ತರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.