ವಿ.ವಿ ಮಟ್ಟದ “ಅಮುಕ್ತ್” ಅಧ್ಯಕ್ಷರಾಗಿ ಡಾ. ಎನ್.ಎಂ ಜೋಸೆಫ್ ಆಯ್ಕೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಡಂತ್ಯಾರು: ಉಡುಪಿ, ದ.ಕ ಮತ್ತು ಕೊಡಗು ಜಿಲ್ಲೆಗಳನ್ನೊಳಗೊಂಡಿರುವ ಮಂಗಳೂರು ವಿಶ್ವವಿದ್ಯಾನಿಲಯದ ಕಾಲೇಜ ಅಧ್ಯಾಪಕರ ಸಂಘ (ಅಮುಕ್ತ್) ಇದರ 2018-19 ನೇ ಸಾಲಿನ ಅಧ್ಯಕ್ಷರಾಗಿ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಅರ್ಥ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಎನ್.ಎಂ ಜೋಸೆಫ್ ಆಯ್ಕೆಯಾಗಿದ್ದಾರೆ.
ಮಂಗಳೂರಿನ ಕೆನರಾ ಕಾಲೇಜಿನಲ್ಲಿ ನಡೆದ ಅಮುಕ್ತ್‌ನ ೩೨ ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಸದ್ರಿ ಸಂಘಟನೆಯು ಕರ್ನಾಟಕ ರಾಜ್ಯ ವಿ.ವಿ ಮತ್ತು ಕಾಲೇಜು ಅಧ್ಯಾಪಕರ ಸಂಘಗಳ ಒಕ್ಕೂಟ (ಎಫ್‌ಯುಸಿಟಿಎಕೆ) ಮತ್ತು ಆಲ್‌ಇಂಡಿಯಾ ಫೆಡರೇಷನ್ ಆಫ್ ಯುನಿವರ್ಸಿಟಿ ಏಂಡ್ ಕಾಲೇಜು ಟೀಚರ್ಸ್ ಆರ್ಗನೈಸೇಷನ್(ಎಐಎಫ್‌ಯುಸಿಟಿಒ) ಇದರ ವ್ಯಾಪ್ತಿಗೆ ಬರುತ್ತಿದ್ದು ಅತ್ಯಂತ ಪ್ರಭಲ ಸಂಘಟನಾ ಶಕ್ತಿ ಹೊಂದಿದ ಸಂಘಟನೆಯಾಗಿದೆ.
1989 ರಲ್ಲಿ ಕಾಲೇಜು ಉಪನ್ಯಾಸಕ ವೃತ್ತಿಗೆ ಪಾದಾರ್ಪಣೆಗೈದಿರುವ ಡಾ. ಎನ್.ಎಮ್ ಜೋಸೆಫ್ ಅವರು ಅತ್ಯುತ್ತಮ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ (ಎನ್‌ಎಸ್‌ಎಸ್) ಪ್ರಶಸ್ತಿ ಪಡೆದವರಾಗಿದ್ದಾರೆ. ಕ್ರಿಯಾಶೀಲ ಸಂಘಟಕರಾಗಿ, ಉತ್ತಮ ಕಾರ್ಯಕ್ರಮ ಉದ್ಘೋಷಕರಾಗಿ, ರಾಷ್ಟ್ರೀಯ ಭಾವೈಖ್ಯತೆ ಮತ್ತು ಧಾರ್ಮಿಕ ಸಾಮರಸ್ಯ, ಜಲಸಂಪನ್ಮೂಲ ಬಳಕೆ ಮತ್ತು ನೀರಿಂಗಿಸುವಿಕೆ ಇತ್ಯಾಧಿ ವಿಚಾರಗಳ ಬಗ್ಗೆ ಕೃಷಿ ಇಲಾಖೆ ಮತ್ತು ಅನೇಕ ಕಡೆ ಸಂಪನ್ಮೂಲ ಉಪನ್ಯಾಸ ನೀಡಿದ್ದಾರೆ.ಮಳೆಕೊಯ್ಲು ಕಾರ್ಯಕ್ರಮವನ್ನು ತಾನು ಸ್ವಂತ ಅಳವಡಿಸಿಕೊಂಡದ್ದೂ ಮಾತ್ರವಲ್ಲದೆ ಅದೇ ಕ್ಷೇತ್ರದಲ್ಲಿ ಉನ್ನತ ಅಭ್ಯಾಸ ನಿರತರಾಗಿ ಅವರು ಮಂಡಿಸಿದ್ದ ವಿಶೇಷ ಪ್ರಬಂಧಕ್ಕೆ ಅವರು ಮೈಸೂರು ವಿ.ವಿ ಯಿಂದ ಡಾಕ್ಟರೇಟ್ ಪದವಿಯನ್ನೂ ಪಡೆದುಕೊಂಡವರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.