ಆ.7: ಪಡ್ಡಂದಡ್ಕದಲ್ಲಿ ಫಿಸಿಯೋ ಥೆರಪಿ ಕೇಂದ್ರದ ಉದ್ಘಾಟನೆ.

ವೇಣೂರು: ಸಾರ್ವಜನಿಕ ಶಿಕ್ಷಣ ಇಲಾಖೆ, ಮಂಗಳೂರು, ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಹೊಸಂಗಡಿ ಗ್ರಾ.ಪಂ., ಎಸ್‌ಡಿಎಂಸಿ ಪಡ್ಡಂದಡ್ಕ ಹಿ.ಪ್ರಾ. ಶಾಲೆ, ಪಡ್ಡಂದಡ್ಕ ಸಮೂಹ ಮತ್ತು ಸಮನ್ವಯ ಸಂಪನ್ಮೂಲ ಕೇಂದ್ರ ನಿರ್ವಹಣಾ ಸಮಿತಿ ಹಾಗೂ ಮೂಡಬಿದಿರೆ ಆಳ್ವಾಸ್ ಫಿಸಿಯೋ ಥೆರಪಿ ಕಾಲೇಜು ಸಹಭಾಗಿತ್ವದಲ್ಲಿ ವೇಣೂರು ವಲಯದ ವಿಶೇಷ ಅಗತ್ಯವುಳ್ಳ ಫಿಸಿಯೋ ಥೆರಪಿ ಕೇಂದ್ರದ ಉದ್ಘಾಟನ ಸಮಾರಂಭವು ಆ.7 ರಂದು ಪಡ್ಡಂದಡ್ಕ ಸ.ಹಿ.ಪ್ರಾ. ಶಾಲಾ ವಠಾರದಲ್ಲಿ ಬೆಳಿಗ್ಗೆ 10 ಗಂಟೆಗೆ ಜರಗಲಿದೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕಾರ್ಯಕ್ರಮ ಉದ್ಘಾಟಿಸಲಿದ್ದು, ತಾ.ಪಂ. ಅಧ್ಯಕ್ಷ ದಿವ್ಯಜ್ಯೋತಿ ಅಧ್ಯಕ್ಷತೆ ವಹಿಸಲಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಭಾಗವಹಿಸಲಿದ್ದಾರೆ .

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.