HomePage_Banner_
HomePage_Banner_
HomePage_Banner_

ಕೊಕ್ಕಡ ಪಾರ್ಪಿಕಲ್ ಸಮೀಪ ಕಾರು ಬಸ್ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಮೃತ್ಯು.

Advt_NewsUnder_1

ಕೊಕ್ಕಡದ ಸಮೀಪ ಕೌಕ್ರಾಡಿ ಗ್ರಾಮದ ಪಾರ್ಪಿಕಲು ಬಳಿ ತಿರುವಿನಲ್ಲಿ ಧರ್ಮಸ್ಥಳದಿಂದ ಬೆಂಗಳೂರು ಕಡೆ ಬರುತ್ತಿದ್ದ ಕೆ.ಎಸ್ .ಆರ್. ಟಿ .ಸಿ ಬಸ್ಸಿಗೆ ಧರ್ಮಸ್ಥಳ ಕ್ಕೆ ತೆರಳುತ್ತಿದ್ದ ಮಾರುತಿ 800 ಕಾರು ಡಿಕ್ಕಿ ಹೊಡೆದ ಪರಿಣಾಮ ಮಾರುತಿ ಕಾರಿನಲ್ಲಿದ್ದ ದಿನೇಶ್ (32.ವ) ಹಾಗೂ ಸಂದೇಶ್ (30.ವ) ರವರು ಸ್ಥಳದಲ್ಲೇ ಮೃತಪಟ್ಟ ಘಟನೆ ಆ.5 ರಂದು ರಾತ್ರಿ ನಡೆದಿದೆ.

ಅಫಘಾತದ ತೀವ್ರತೆಯಿಂದ ಮಾರುತಿ ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಗಾಯಾಳುಗಳನ್ನು ಸ್ಥಳೀಯರ ಸಹಕಾರದಿಂದ ಕಾರಿನಿಂದ ಹೊರಗೆ ತೆಗೆದು ನೆಲ್ಯಾಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಗಾಯಾಳುಗಳು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ವರದಿಯಾಗಿದೆ.

ಮೃತರನ್ನು ಧರ್ಮಸ್ಥಳದ ಮುಳಿಕ್ಕಾರು ಮನೆ ವೀರಪ್ಪ ಮಲೆಕುಡಿಯರವರ ಪುತ್ರ ದಿನೇಶ್ ಪಿ. ಮತ್ತು ಇನ್ನೋರ್ವ ಧರ್ಮಸ್ಥಳದ ಸಂದು ಸೌಂಡ್ಸ್ & ಲೈಟಿಂಗ್ಸ್ ಮಾಲಕ  ಸಂದೇಶ್ ಎಂದು ಗುರುತಿಸಲಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.