HomePage_Banner_
HomePage_Banner_
HomePage_Banner_

ಉಜಿರೆ: ‘ಅಮೇರಿಕಾ ಪ್ರವಾಸ ಕಥನ’ ಅತಿಥಿ ಉಪನ್ಯಾಸ ಕಾರ್ಯಕ್ರಮ.

Advt_NewsUnder_1

ಉಜಿರೆ: “ಬಾಲ್ಯದಲ್ಲಿರುವ ನಮ್ಮ ಕ್ರಿಯಾಶೀಲತೆ, ಕುತೂಹಲ ವಯಸ್ಕರಾದಂತೆ ನಶಿಸಿಹೋಗುತ್ತದೆ. ಮಕ್ಕಳಲ್ಲಿರುವ ಕುತೂಹಲ ಆಸಕ್ತಿ ಬೆಳೆದಂತೆ ಕಡಿಮೆಯಾಗುತ್ತದೆ. ಆದರೆ ಅಮೇರಿಕಾ ದೇಶದಲ್ಲಿ ಈ ಆಸಕ್ತಿ, ಕುತೂಹಲವನ್ನು ಉಳಿಸಿ ಬೆಳೆಸುವ ಪ್ರಯತ್ನಗಳನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಅಮೇರಿಕಾದ ವಿಜ್ಞಾನ ಮ್ಯೂಸಿಯಂಗಳಲ್ಲಿ ಈ ಬಗ್ಗೆ ವಿವಿಧ ಮಾದರಿ ಪ್ರಾತ್ಯಕ್ಷಿಕೆಗಳನ್ನು ಆಕರ್ಷಕವಾಗಿ ವ್ಯವಸ್ಥೆ ಮಾಡಿರುತ್ತಾರೆ” ಎಂದು ಪ್ರೊ . ಸೂರ್ಯನಾರಾಯಣ ಅವರು ಹೇಳಿದರು.

ಎಸ್.ಡಿ.ಎಮ್ ಕಾಲೇಜಿನ  ಇಂಗ್ಲೀಷ್  ವಿಭಾಗದ ಉಪನ್ಯಾಸಕರಾದ ಅವರು ಎಸ್.ಡಿ.ಎಮ್ ಉಜಿರೆ ಕಾಲೇಜಿನ ಭೌತಶಾಸ್ತ್ರ ವಿಭಾಗದ ‘ಸ್ಪೆಕ್ಟ್ರಾ’ ಸಂಘ ಆಯೋಜಿಸಿದ್ದ ‘ಅಮೇರಿಕಾ ಪ್ರವಾಸ ಕಥನ’ ಎಂಬ ಅತಿಥಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಅವರು ತಮ್ಮ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ವಿಜ್ಞಾನಕ್ಕೆ ಸಂಬಂಧಿಸಿದ ವಸ್ತು ಸಂಗ್ರಹಾಲಯದ ಅನೇಕ ವಿಡಿಯೋ ಹಾಗೂ ಚಿತ್ರಣಗಳನ್ನು ಪ್ರದರ್ಶಿಸಿದರು. ಆಕಾಶದಿಂದ ಚಿತ್ರೀಕರಿಸಿದ ಕಾಮನಬಿಲ್ಲಿನ ವಿಶಿಷ್ಟ ದೃಶ್ಯಾವಳಿಗಳು,ಅಮೇರಿಕಾದ ಅತ್ಯಂತ ಪ್ರಸಿದ್ಧ ಜಲಪಾತವಾದ ‘ನಯಾಗರಾ ಫಾಲ್ಸ್ ‘ನಲ್ಲಿ ತಮಗಾದ ವಿಶೇಷ ಅನುಭವಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಸುಮಾರು 50 ದಿನಗಳ ಪ್ರವಾಸ ಮಾಡಿದ ಅವರು ಅಮೇರಿಕಾದ ವ್ಯವಸ್ಥೆಗಳನ್ನು ಶ್ಲಾಘಿಸಿದ್ದಾರೆ. ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥ, ಉಪಪ್ರಾಂಶುಪಾಲರಾದ ಪ್ರೊ. ಸತೀಶ್ಚಂದ್ರ, ವಿಭಾಗದ ಉಪನ್ಯಾಸಕರು, ಭೌತಶಾಸ್ತ್ರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.