HomePage_Banner_
HomePage_Banner_
HomePage_Banner_

ಕಣಿಯೂರು ಗ್ರಾಮ ಸಭೆ.

Advt_NewsUnder_1

ಪದ್ಮುಂಜ: ಇಲ್ಲಿಯ ಕಣಿಯೂರು ಗ್ರಾಮ ಪಂಚಾಯತಿಯ ಗ್ರಾಮ ಸಭೆಯು ಗ್ರಾ.ಪಂ ಅಧ್ಯಕ್ಷರಾದ ಸುನಿಲ್ ಸಾಲಿಯಾನ್ ರವರ ಅಧ್ಯಕ್ಷತೆಯಲ್ಲಿ ಜು. 31 ರಂದು ಪದ್ಮುಂಜ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ಜರಗಿತು.
ಶಿಶು ಮತ್ತು ಮಹಿಳಾ ಅಭಿವೃದ್ಧ್ದಿ ಸಹಾಯಕ ಅಧಿಕಾರಿ ನಂದನಾರವರು ನೋಡಲ್ ಅಧಿಕಾರಿಯಾಗಿ ಗ್ರಾಮ ಸಭೆ ನಡೆಸಿಕೊಟ್ಟರು. ತಾ ಪಂ ಸದಸ್ಯೆ ಅಮಿತಾ, ಗ್ರಾ.ಪಂ.ಉಪಾಧ್ಯಕ್ಷೆ ಆಶಾ, ಸದಸ್ಯರು ಗಳಾದ, ಯಶೋಧರ ಶೆಟ್ಟಿ, ಲಲಿತ, ಪ್ರಮೀಳ, ಗಾಯತ್ರಿ, ನರಸಿಂಹ ಶೆಟ್ಟಿ, ಸೀತಾರಾಮ ಮಡಿವಾಳ, ಪುಷ್ಪ, ಸೌಮ್ಯ, ಅಬ್ದುಲ್ ಶುಕುರ್, ಜಲಜಾಕ್ಷಿ, ಯಶೋದ, ಕೇಶವ ಗೌಡ, ಯಶವಂತ, ಯಮುನಾ ಉಪಸ್ಥಿತರಿದ್ದರು.
ಆರೋಗ್ಯ ಇಲಾಖೆ ಯಿಂದ ರಶ್ಮಿ ಹಾಗೂ ಸಹನಾ, ಪೊಲೀಸ್ ಇಲಾಖೆ ಯಿಂದ ಶ್ರೀದರ್, ಕಂದಾಯ ಇಲಾಖೆ ಯಿಂದ ಸತೀಶ್, ಅರಣ್ಯ ಇಲಾಖೆ ಯಿಂದ ಆನಂದ ರಾಥೋಡ್, ಶಿಕ್ಷಣ ಇಲಾಖೆಯಿಂದ ಸಂಧ್ಯಾ, ತೋಟ ಗಾರಿಕಾ ಇಲಾಖಾಧಿಕಾರಿಯವರು, ಇಲಾಖಾ ವಾರು ಮಾಹಿತಿ ನೀಡಿದರು. ಇ.ಒ ಬಸವರಾಜ್ ಅಯ್ಯಣ್ಣನವರ್ ಉಪಸ್ಥಿತರಿದ್ದು ಮಾತನಾಡಿದರು.
ಪ್ರತಿ ಗ್ರಾಮ ಸಭೆಯಲ್ಲಿ ಕೇಳಿ ಬಂದಂತೆ ಈ ಸಲದ ಗ್ರಾಮ ಸಭೆಯಲ್ಲೂ ಕೇಳಿ ಬಂದ ಪ್ರಮುಖ ಬೇಡಿಕೆಯಾಗಿತ್ತು. ಕಣಿಯೂರು ಗ್ರಾಮಕ್ಕೆ ೨೦೧೫-೧೬ನೇ ಸಾಲಿನಲ್ಲಿ ಗ್ರಾಮ ವಿಕಾಸ ಯೋಜನೆಯಡಿ ಮಂಜೂರಾದ ಕಾಮಗಾರಿಗಳು ಇನ್ನೂ ಅನುಷ್ಠಾನ ಗೊಂಡಿಲ್ಲ, ಕೈಗೊಂಡ ಕಾಮಗಾರಿಗಳು ಸಂಪೂರ್ಣ ಕಳಪೆ ಯಾಗಿದೆ. ಈ ಬಗ್ಗೆ ಗುತ್ತಿಗೆದಾರರಿಂದ ಹಣ ಮರುಪಾವತಿ ಮಾಡುವಂತೆ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.
ಅಧ್ಯಕ್ಷ ಭಾಷಣ ಮಾಡಿದ ಸುನೀಲ್ ಸಾಲಿಯಾನ್ ರವರು ಗ್ರಾಮ ಪಂಚಾಯತಿ ವತಿಯಿಂದ ಗರಿಷ್ಠ ಮಟ್ಟದ ಕಾಮಗಾರಿಗಳನ್ನು ನಡೆಸಲಾಗಿದೆ ಕಾಮಗಾರಿ ಮುಗಿದ ನಂತರ ಕಳಪೆ ಕಾಮಗಾರಿ ಎಂಬುದರ ಬದಲು, ಕಾಮಗಾರಿ ನಡೆಸುವಾಗಲೇ ಗ್ರಾಮಸ್ಥರು ಎಚ್ಚೆತ್ತುಗೊಂಡಲ್ಲಿ ಗುತ್ತಿಗೆದಾರರೂ ಜಾಗ್ರತೆ ವಹಿಸುತ್ತಾರೆ. ಊರಿನ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ ಎಂದರು.
ಗ್ರಾಮಸ್ಥರ ಹಲವಾರು ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದ ಪಂ. ಅಭಿವೃದ್ದಿ ಅಧಿಕಾರಿ ರಾಜಶೇಖರ ಶೆಟ್ಟಿಯವರು ಸ್ವಾಗತಿಸಿ, ಧನ್ಯವಾದವಿತ್ತರು. ಸಿಬ್ಬಂದಿ ಉಮೇಶ್ ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ: ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಬಸವರಾಜ್ ಅಯ್ಯಣ್ಣನವರ್ ಜು. 31 ರಂದು ನಿವೃತ್ತಿ ಹೊಂದಿದ್ದು, ಅವರನ್ನು ಗ್ರಾಮಸ್ಥರ ಪರವಾಗಿ ಅಧ್ಯಕ್ಷ ಸುನೀಲ್ ಸಾಲಿಯಾನ್ ರವರು ಸನ್ಮಾನಿಸಿ ಶುಭ ಹಾರೈಸಿದರು.

ಹಿಂದಿನ ಹಲವಾರು ಗ್ರಾಮ ಸಭೆಗಳಲ್ಲಿ ಕುಪ್ಪೆಟ್ಟಿ ನೀಲ್ತಿಯಾರ್ ರಸ್ತೆಗೆ ಡಾಮರೀಕರಣವಾಗಬೇಕೆಂಬ ಒತ್ತಡಗಳು ಕೇಳಿ ಬರುತ್ತಿದ್ದರೆ, ಸದ್ರಿ ರಸ್ತೆಗೆ ಈಗಾಗಲೇ ಕಾಂಕ್ರಿಟೀಕರಣಗೊಂಡಿದ್ದರೂ ಕಳಪೆ ಕಾಮಗಾರಿಯಾಗಿದೆ. ರಸ್ತೆಗಳು ಅಲ್ಲಲ್ಲಿ ಬಿರುಕುಬಿಟ್ಟಿದೆ. ಖಾಸಗಿ ವ್ಯಕ್ತಿಗಳು ರಸ್ತೆ ಚರಂಡಿಗಳನ್ನು ಮುಚ್ಚಿರುವುದರಿಂದ ಕೊಳಚೆ ನೀರುಗಳು ರಸ್ತೆ ಮೇಲೆ ಹರಿಯುತ್ತಿದೆ. ಸೂಕ್ತ ಕ್ರಮಕೈಗೊಳ್ಳಲು ಗ್ರಾಮಸ್ಥರು ಒತ್ತಾಯಿಸಿದರು. ನೆಕ್ಕಿಲು ಶಾಲೆಯ ಬಿಸಿಯೂಟದ ಕೊಠಡಿ, ಪದ್ಮುಂಜ ಅಂಗನವಾಡಿ ಕಟ್ಟಡ, ಪದ್ಮುಂಜ ಪ್ರಾಥಮಿಕ ಶಾಲಾ ಕಟ್ಟಡ ದುರಸ್ಥಿ ಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.