ಉಜಿರೆ: ಗೌಡರ ಯಾನೆ ಒಕ್ಕಲಿಗರ ಸಂಘದಿಂದ ವಾರ್ಷಿಕ ಕ್ರೀಡಾಕೂಟ.

ಉಜಿರೆ ಗ್ರಾಮದ ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ವತಿಯಿಂದ ಜು.29 ರಂದು ಉಜಿರೆ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ವಾರ್ಷಿಕ ಕ್ರೀಡಾಕೂಟ ನಡೆಯಿತು. ಕ್ರೀಡಾಕೂಟವನ್ನು ರಾಜ್ಯ ಮತ್ತು ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದ್ದ ಮಾಜಿ ಕ್ರೀಡಾಪಟು ಶ್ರೀಮತಿ ಪುಷ್ಪಾ ಶ್ರೀನಿವಾಸ ಗೌಡ, ಉಂಡ್ಯಾಪುನಗರ ಉಜಿರೆ ಇವರು ದೀಪ ಬೆಳಗಿಸಿ ಉದ್ಘಾಟಿಸಿ, ವಿದ್ಯಾರ್ಥಿಗಳಲ್ಲಿ ಮತ್ತು ಇತರರಲ್ಲಿರುವ ಅಗಾಧ ಕ್ರೀಡಾ ಶಕ್ತಿಗೆ ಪೋಷಕರು ಮಾತ್ರವಲ್ಲದೆ, ಸಮಾಜದ ಎಲ್ಲರೂ ಕೂಡ ಪ್ರೋತ್ಸಾಹ ನೀಡಿದರೆ ಮಾತ್ರ ಗ್ರಾಮೀಣ ಪ್ರತಿಭೆಗಳು ಹೊರ ಬರಲು ಸಾಧ್ಯ ಎಂದು ಹೇಳಿದರು.
ಅತಿಥಿಯಾಗಿದ್ದ ಮತ್ತು ಕ್ರೀಡಾ ಬಹುಮಾನಗಳ ಪ್ರಯೋಜಕರಾಗಿದ್ದ ವೆಂಕಟೇಶ್ ಎಮ್.ಬಿ. ಉಜಿರೆ, ಇಷ್ಟೊಂದು ಸಂಖ್ಯೆಯಲ್ಲಿ ಜನ ಗ್ರಾಮಮಟ್ಟದಲ್ಲಿ ನಮ್ಮ ಸಮಾಜದ ಜನರೆಲ್ಲಾ ಈ ಕ್ರೀಡಾಕೂಟದಲ್ಲಿ ಸೇರಿದ್ದು ಅತೀವ ಸಂತೋಷವುಂಟು ಮಾಡಿದೆ ಎಂದರು.
ಸಂಘಕ್ಕೆ ಹಿಂದಿನಿಂದಲೂ ಪ್ರೋತ್ಸಾಹಕರಾಗಿದ್ದ ಕೈಕುರೆ ಕುಟುಂಬದ ಶ್ರೀಮತಿ ಉಷಾ ವೆಂಕಟ್ರಮಣ ಗೌಡ ಕೈಕುರೆ, ಅಂದಿನ ಮಧ್ಯಾಹ್ನ ಭೋಜನ ಪ್ರಾಯೋಜಕರಾಗಿದ್ದ ಸತೀಶ್ ಗೌಡ, ಸತ್ಕಾರ್ ಟ್ರೇಡರ್‍ಸ್ ಉಜಿರೆ, ಹಾಗೂ ಚಂದನ್ ಹರಿಓಂ ಟ್ರೇಡರ್‍ಸ್ ಉಜಿರೆ ಇವರುಗಳು ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ಕ್ರೀಡಾ ಕೂಟದ ನಿರ್ದೇಶಕರಾದ ಧರ್ಮೇಂದ್ರರವರು ಕ್ರೀಡಾಕೂಟವನ್ನು ಸಂಯೋಜಿಸಿ ಅಗತ್ಯ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಗ್ರಾಮ ಸಮಿತಿ ಅಧ್ಯಕ್ಷ ಪ್ರಕಾಶ್ ಗೌಡ ಅಪ್ರಮೇಯ, ಕಾರ್ಯದರ್ಶಿ ಧರ್ಣಪ್ಪ ಗೌಡ ಧರಣಿ, ಕೋಶಾಧಿಕಾರಿ ರಮೇಶ್ ಗೌಡ ಪೈಲಾರ್, ಯುವ ವೇದಿಕೆ ಕಾರ್ಯದರ್ಶಿ ಶೈಲೇಶ್ ಧರಣಿ, ಉಮೇಶ್ ಗೌಡ ಉಂಡ್ಯಾಪು ಉಪಸ್ಥಿತರಿದ್ದರು. ದೈಹಿಕ ಶಿಕ್ಷಕರುಗಳಾದ ಲಕ್ಷ್ಮಣ್ ಜಿ.ಡಿ, ಚರಣ್, ಗುಣಪಾಲ್, ಶ್ರೀಮತಿ ವಸಂತಿ, ಉಮೇಶ್ ಗೌಡ, ಕ್ರೀಡಾಕೂಟದಲ್ಲಿ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.