ಬೆಳ್ತಂಗಡಿ: ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಬೆಳ್ತಂಗಡಿಯ ಕೆ.ಸದಾಶಿವ ಶೆಣೈ ರವರು ಅವಿರೋಧವಾಗಿ ಪುನರಾಯ್ಕೆಗೊಂಡಿದ್ದಾರೆ.
ಕನ್ನಡದ ಖ್ಯಾತ ಪತ್ರಕರ್ತರಾದ ದಿ| ಪಿ. ಲಂಕೇಶ್ರವರ ಗರಡಿಯಲ್ಲಿ ಬೆಳೆದ ಸದಾಶಿವ ಶೆಣೈ ರವರು ಲಂಕೆಶ್ ಪತ್ರಿಕೆಯಲ್ಲೂ ಸಿನಿಮಾ ಪತ್ರಕರ್ತರಾಗಿ, ನಂತರ ಪ್ರಚಲಿತ ರಾಜಕೀಯ ವಿದ್ಯಾಮಾನಗಳ ಬಗ್ಗೆ ತಮ್ಮದೇ ಶೈಲಿಯ ಲೇಖನಗಳಿಂದ ಪ್ರಖ್ಯಾತರಾಗಿದ್ದಾರೆ.
ಈ ಟಿವಿ ಕನ್ನಡದಲ್ಲಿ ಮೂಡಿ ಬರುತ್ತಿದ್ದ ವಾರದ ಮಾತು ಕಾರ್ಯಕ್ರಮದ ರೂವಾರಿಯಾಗಿದ್ದರು. ಚಲನಚಿತ್ರ ನಟರಾದ ಡಾ| ವಿಷ್ಣುವರ್ಧನ್, ಡಾ| ಜಯಂತಿ ಉಪೇಂದ್ರ , ಶಿವಣ್ಣರವರ ಬಯೋಗ್ರಫಿಯನ್ನು ಬರೆದು ತಮ್ಮದೇ ಸೌರವ ಪ್ರಕಾಶನದ ಮೂಲಕ ಪ್ರಕಟಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು.
ಸರಳ ಸಜ್ಜನಿಕೆಯ ಹಾಗೂ ಸದಾ ನಗುಮೊಗದ ಶೆಣೈಯವರು ಬೆಂಗಳೂರು ಪ್ರೆಸ್ ಕ್ಲಬ್ ಕಾರ್ಯದರ್ಶಿಯಗಿ ಬಹಳ ವರ್ಷಗಳಿಂದ ಸೇವೆ ಸಲ್ಲಿಸುತಿದ್ದು, ಇವರು ದ್ವಿತೀಯ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಬಿ ಟಿವಿಯ ಮನೋರಂಜನಾ ವಿಭಾಗದ ಮುಖ್ಯಸ್ಥರಾಗಿರುವ ಕೆ.ಸದಾಶಿವ ಶೆಣೈ ಯವರು ಪತ್ರಿಕಾ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.