ಧರ್ಮ ಸಂಸದ್: ಕುವೆಟ್ಟು ಜಿ.ಪಂ ವ್ಯಾಪ್ತಿಯ ಸಮಾಲೋಚನಾ ಸಭೆ.

ಮಡಂತ್ಯಾರು: ಶ್ರೀರಾಮ ಕ್ಷೇತ್ರದಲ್ಲಿ ಸೆ.3 ರಂದು ನಡೆಯಲಿರುವ ಧರ್ಮ ಸಂಸತ್ ಕಾರ್ಯಕ್ರಮದ ಕುವೆಟ್ಟು ಜಿಲ್ಲಾ ಪಂಚಾಯಿತಿಯ ವ್ಯಾಪ್ತಿಯ ಮಚ್ಚಿನ, ಪಾರೆಂಕಿ, ಕುಕ್ಕಳ, ಮಡಂತ್ಯಾರ್, ಮಾಲಾಡಿ, ಸೋಣಂದೂರು ಗ್ರಾಮಗಳ ಸಭೆಯು ಜು.30 ರಂದು ಮಡಂತ್ಯಾರು ಗಣಪತಿ ಮಂಟಪದಲ್ಲಿ ನಡೆಯಿತು. ಸಭೆಯಲ್ಲಿ ಧರ್ಮ ಸಂಸತ್ ಕಾರ್ಯಧ್ಯಕ್ಷರಾದ ಪ್ರತಾಪ್‌ಸಿಂಹ ನಾಯಕ್ , ಜಿಲ್ಲಾ ಉಪಾಧ್ಯಕ್ಷರಾದ ಪಿತಾಂಬರ ಹೇರಾಜೆ, ತಾಲೂಕು ಪ್ರಧಾನ ಸಂಚಾಲಕರಾದ ಸಂಪತ್ ಬಿ ಸುವರ್ಣ, ಮಡಂತ್ಯಾರು ಗ್ರಾ.ಪಂ ಅಧ್ಯಕ್ಷ ಗೋಪಾಲಕೃಷ್ಣ .ಕೆ ಮತ್ತು ಜಯಂತ್ ಶೆಟ್ಟಿ ನಿವೃತ್ತ ಸೈನಿಕರಾದ ಕಾಂತಪ್ಪ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಲಯ ಹಾಗೂ ಗ್ರಾಮ ಸಮಿತಿ ರಚಿಸಲಾಯಿತು. ಕುವೆಟ್ಟು ಜಿಲ್ಲಾ ಪಂಚಾಯತ್ ಪ್ರಧಾನ ಸಂಚಾಲಕರದ ಪ್ರಶಾಂತ್ ಪ್ರತಿಮ, ಸಹ ಸಂಚಾಲಕರಾದ ನಾರಾಯಣ ಪೂಜಾರಿ ಮಚ್ಚಿನ ,ವಿಶ್ವನಾಥ್ ಪೂಜಾರಿ ಹಾರಬೆ ಸಭೆಯ ಯಶಸ್ವಿಗೆ ಸಹಕರಿಸಿದರು. ಪದ್ಮನಾಭ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.