ಆ.27 ರಿಂದ ಆರಾಧನಾ ಮಹೋತ್ಸವ.

Advt_NewsUnder_1
Advt_NewsUnder_1
Advt_NewsUnder_1

ಲಾಯಿಲ: ಬೆಳ್ತಂಗಡಿ ನೇತ್ರಾವತಿ ತಟದಲ್ಲಿರುವ ಶ್ರೀ ರಾಮಾಂಜನೇಯ ಮತ್ತು ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಆ.27 ರಿಂದ 29 ರವರೆಗೆ ಆರಾಧನಾ ಮಹೋತ್ಸವ ಅತ್ಯಂತ ವಿಜೃಂಬಣೆಯಿಂದ ಜರುಗಲಿದ್ದು, ತಾಲೂಕಿನಾದ್ಯಂತ ಹೆಚ್ಚಿನ ಭಕ್ತರು ಶ್ರೀ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಪಿತಾಂಬರ ಹೇರಾಜೆಯವರು ಜು.29 ರಂದು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಈ ಸಭೆಯಲ್ಲಿ ಮಹಾಬಲ ಶೆಟ್ಟಿ, ಮೋಹನದಾಸ, ಚಂದ್ರಹಾಸ ಕೇದೆ, ಪದ್ಮನಾಭ ಸಾಲಿಯಾನ್, ಚಿದಾನಂದ ಇಡ್ಯ, ಕೃಷ್ಣ ಶೆಟ್ಟಿ, ಸುರೇಶ್ ಉಜಿರೆ, ಸೂರ್ಯನಾರಾಯಣ ಕಾರಂತ, ಶ್ರೀಮತಿ ರಾಜಶ್ರೀ ರಮಣ, ಶ್ರೀಮತಿ ಶಾಂಭವಿ.ವಿ.ಬಂಗೇರ, ಮತ್ತಿತರ ಗಣ್ಯರು ಭಾಗವಹಿಸಿದ್ದರು.
ಟ್ರಸ್ಟಿಗಳಾದ ಶಂಕರ್ ಹೆಗ್ಡೆ ಸ್ವಾಗತಿಸಿ, ಶೇಖರ ಬಂಗೇರಾ ಕಾರ್ಯಕ್ರಮ ನಿರ್ವಹಿಸಿದರು. ಸುರೇಶ್ ಶೆಟ್ಟಿ ಪ್ರಸ್ತಾವಣೆಗೈದು, ವಸಂತ ಸುವರ್ಣ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.