ತೋಟತ್ತಾಡಿ: ವನಮಹೋತ್ಸವ ಕಾರ್ಯಕ್ರಮ.

Advt_NewsUnder_1
Advt_NewsUnder_1
Advt_NewsUnder_1

ತೋಟತ್ತಾಡಿ: ಸ.ಉ.ಮಾ.ಹಿ.ಪ್ರಾ.ಶಾಲೆ ತೋಟತ್ತಾಡಿ ಮತ್ತು ಅರಣ್ಯ ಇಲಾಖೆಯ ವತಿಯಿಂದ ಜು.೨೮ ರಂದು ಶಾಲಾ ವಠಾರದಲ್ಲಿ ವನಮಹೋತ್ಸವ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ವಲಯ ಅರಣ್ಯಾಧಿಕಾರಿ ಸಬ್ಬಯ್ಯ ಉಜಿರೆ, ಜಿ.ಪಂ ಸದಸ್ಯೆ ನಮಿತಾ, ಚಾರ್ಮಾಡಿ ತಾ.ಪಂ ಸದಸ್ಯ ಕೊರಗಪ್ಪ ಗೌಡ.ಎ, ನೆರಿಯ ತಾ.ಪಂ ಸದಸ್ಯ ವಿ.ಟಿ ಸೆಬಾಸ್ಟಿಯನ್, ಗ್ರಾ.ಪಂ ಸದಸ್ಯರಾದ ಓಬಯ್ಯ ಗೌಡ, ದೇಜಪ್ಪ ಪೂಜಾರಿ, ಪ್ರೇಮಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಗ್ರಾಮ ಅರಣ್ಯ ಸಮಿತಿ ಸದಸ್ಯರು, ಕೃಷ್ಣ ಮುದ್ದಿನಡ್ಕ, ಜಗದೀಶ ಆಚಾರ್ಯ, ಕು| ಸುಜಾತ, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯ ಕಲ್ಲರಿಗೆ ಲಕ್ಷ್ಮಣ ಗೌಡ, ಶಾಲಾ ಶಿಕ್ಷಕ ವೃಂದ, ಚಿಬಿದ್ರೆ ಉಪ ವಲಯಾರಣ್ಯಾಧಿಕಾರಿ ಭವಾನಿಶಂಕರ್, ಚಾರ್ಮಾಡಿ ಉಪವಲಯ ಅರಣ್ಯಾಧಿಕಾರಿ ಕೆ. ರವೀಂದ್ರ, ತೋಟತ್ತಾಡಿ ಅರಣ್ಯ ರಕ್ಷಕಿ ಕು| ಕಮಲ, ವಲಯದ ಎಲ್ಲಾ ಅರಣ್ಯ ಸಿಬ್ಬಂದಿಗಳು, ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ಮತ್ತು ಎಲ್ಲಾ ಅತಿಥಿಗಳು ಗಿಡಗಳನ್ನು ನೆಟ್ಟು ಕಾರ್ಯಕ್ರಮ ನಡೆಸಿಕೊಟ್ಟರು. ಸುಮಾರು ೮೦ ಗಿಡಗಳನ್ನು ಮಕ್ಕಳ ಮುಖಾಂತರ ಅವರ ಮನೆಗಳಿಗೆ ಗಿಡಗಳನ್ನು ವಿತರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕ ತಮ್ಮಯ್ಯ ಗೌಡ ಸ್ವಾಗತಿಸಿ, ಶಿಕ್ಷಕ ದಿನಕರ ನಾಯಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.