ಬೆಳ್ತಂಗಡಿ: ಮಕ್ಕಳ ಸಂಖ್ಯೆ ಕ್ಷೀಣಿಸಿರುವ ಕಡೆ ವ್ಯವಸ್ಥೆಗಳನ್ನು ನೀಡಿ ಅದು ಸದುಪಯೋಗವಾಗದೇ ಇರುವುದನ್ನು ಗಮನಿಸಿ ಹಾಗೂ ಮೂಲಸೌಕರ್ಯ ವೃದ್ಧಿಗೆ ಇನ್ನಷ್ಟು ಒತ್ತು ನೀಡುವ ನಿಟ್ಟಿನಲ್ಲಿ ಗ್ರಾಮಕ್ಕೊಂದು ಮಾದರಿ ಶಾಲೆ ಎಂಬ ಸರಕಾರದ ಪರಿಕಲ್ಪನೆಯನ್ನು ನಾನು ಸ್ವಾಗತಿಸುತ್ತೇನೆ. ಮುಂದಕ್ಕೆ ಸರಕಾರಿ ಶಾಲೆಗಳ ವಾತಾವರಣವನ್ನು ಮಕ್ಕಳ ಮತ್ತು ಹೆತ್ತವರ ಆಕರ್ಷಣೀಯ ಕೇಂದ್ರವಾಗಿಸುವ ನಿಟ್ಟಿನಲ್ಲಿ ಎಲ್ಲ ಶಾಲೆಗಳೂ ನೀಲಿ ನಕಾಶೆ ತಯಾರಿಸಬೇಕಾಗಿದೆ. ಮೆಕಾಲೆ ಶಿಕ್ಷಣದಲ್ಲಿ ತಂದೆ ತಾಯಿಗೆ ಗೌರವ ನೀಡಬೇಕು ಎಂಬ ಅಂಶ ಎಲ್ಲೂ ಉಲ್ಲೇಖವಾಗುತ್ತಿಲ್ಲ. ಆದ್ದರಿಂದ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅಮೋಲಾಗ್ರ ಬದಲಾವಣೆಯಾಗಿ ಮೌಲ್ಯಾಧಿಧಾರಿತ ಶಿಕ್ಷಣ ಕ್ರಮ ಜಾರಿಗೆ ಬರಬೇಕಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಸುವರ್ಣ ಆರ್ಕೆಡ್ನಲ್ಲಿ ಜು. 29 ರಂದು, ಶಿಕ್ಷಣ ಸಂಪನ್ಮೂಲ ಕೇಂದ್ರ ಬೆಳ್ತಂಗಡಿ, ಎಸ್ಡಿಎಂಸಿ ಸಮನ್ವಯ ವೇದಿಕೆ ಬೆಳ್ತಂಗಡಿ ಇವುಗಳ ಜಂಟಿ ಆಶ್ರಯದಲ್ಲಿ ಬೆಳ್ತಂಗಡಿ ಕ್ಷೇತ್ರದ ಶಾಸಕರಿಗೆ ಅಭಿನಂದನೆ ಮತ್ತು ತಾಲೂಕಿನ ಎಲ್ಲಾ ಜಿ.ಪಂ, ತಾ.ಪಂ, ಗ್ರಾ.ಪಂ ಜನಪ್ರತಿನಿಧಿಗಳ ಜೊಎಗೆ ಶಿಕ್ಷಣ ಸಂಪನ್ಮೂಲ ಕೇಂದ್ರದ ಜೊತೆಗೆ ಚಿಂತನ- ಮಂಥನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆಯನ್ನು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಶ್ರೀಧರ ರಾವ್ ಕಳೆಂಜ ವಹಿಸಿದ್ದರು. ಮಂಗಳೂರು ಪಡಿ ಸಂಸ್ಥೆಯ ತರಬೇತಿ ಸಂಯೋಜಕಿ ಕಸ್ತೂರಿ ಆರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪಡಿ ಸಂಸ್ಥೆಯ ನಿರ್ದೇಶಕ ರೆನ್ನಿ ಡಿಸೋಜಾ, ಎಸ್ಡಿಎಂಸಿ ಸಮನ್ವಯ ವೇದಿಕೆ ಅಧ್ಯಕ್ಷ ರಮೇಶ್ ಶೆಟ್ಟಿ, ಜಿಲ್ಲಾ ಒಕ್ಕೂಟದ ಅಧ್ಯಕ್ಷ ಪ್ರೇಮಿ ಫೆರ್ನಾಂಡಿಸ್, ಉಪಾಧ್ಯಕ್ಷ ನೀಲಕಂಠ ಶೆಟ್ಟಿ, ವೇದಿಕೆಯಲ್ಲಿದ್ದರು.
ಸುಧಾಮಣಿ ಮುಂಡೂರು ಮತ್ತು ಝಾಕಿರ್, ಸಿ.ಕೆ ಚಂದ್ರಕಲಾ, ಚಿಂತನಾ ಮುಂಡತ್ತೋಡಿ, ಗೋಪಾಲಕೃಷ್ಣ, ಸಹಿತ ಎಲ್ಲಾ ಪದಾಧಿಕಾರಿಗಳು ಪೂರಕ ಸಹಕಾರ ನೀಡಿ ಯಶಸ್ವಿಗೊಳಿಸಿದರು.