ಹುಣ್ಸೆಕಟ್ಟೆಯಲ್ಲಿ ಗ್ರಾ.ಯೋಜನೆಯಿಂದ ಆಟಿಡೊಂಜಿ ಕಾರ್ಯಕ್ರಮ.

ಬೆಳ್ತಂಗಡಿ:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬೆಳ್ತಂಗಡಿ, ಪ್ರಗತಿಬಂಧು ಜ್ಞಾನವಿಕಾಸ ಸ್ವಸಹಾಯ ಸಂಘಗಳ ಒಕ್ಕೂಟ ಬೆಳ್ತಂಗಡಿ `ಬಿ’ ಹುಣ್ಸೆಕಟ್ಟೆ ಇದರ ಸಹಯೋಗದಲ್ಲಿ  ಜು. 29 ರಂದು ಹುಣ್ಸೆಕಟ್ಟೆ ಸಭಾಭವನದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಜರುಗಿತು. ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ ಕಾರ್ಯಕ್ರಮದಲ್ಲಿ  ಭಾಗವಹಿಸಿದ್ದರು.

ಬೆಳ್ತಂಗಡಿ ನಗರ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಸಂಪನ್ಮೂಲ ವ್ಯಕ್ತಿಯಾಗಿ ಸದಾನಂದ ಬಿ ಮುಂಡಾಜೆ , ನ.ಪಂ.ಸದಸ್ಯ ರಾಜೇಶ್, ಧರ್ಮಸ್ಥಳ ಎಸ್‌ಎಚ್‌ಐ ಸೇವಾ ವಿಭಾಗ ಕೇಂದ್ರ ಕಚೇರಿಯ ಯೋಜನಾಧಿಕಾರಿ ಪ್ರದೀಪ್ ಜಿ, ವಲಯಾಧ್ಯಕ್ಷ ಮಧುಸೂಧನ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಅಶ್ವಿನಿ, ಸೇವಾ ಪ್ರತಿನಿಧಿಪ್ರಮೀಳಾ ಉಪಸ್ಥಿತರಿದ್ದರು.
ಒಕ್ಕೂಟದ ಅಧ್ಯಕ್ಷ ದಯಾನಂದ ಕೋಟ್ಯಾನ್ ಸ್ವಾಗತಿಸಿದರು. ವಿಶಾಲ ವಂದಿಸಿದರು. ವಲಯ ಮೇಲ್ವಿಚಾರಕ ರಾಜೇಶ್ ಪಿ. ನಿರ್ವಹಿಸಿದರು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.