ರಿಕ್ಷಾ ಚಾಲಕ ಮಾಲಕರ ಸಮಸ್ಯೆಗೆ ಶೀಘ್ರ ಸ್ಪಂದನೆ: ಶಾಸಕ ಪೂಂಜ ಭರವಸೆ.

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ತುರ್ತು ಸಂದರ್ಭಗಳಲ್ಲಿ ರಿಕ್ಷಾ ಚಾಲಕರುಗಳು ಮತ್ತು ಮಾಲಕರ ಸೇವೆ ಬೆಲೆ ಕಟ್ಟಲಾಗದ್ದು. ಪ್ರತಿಯೊಬ್ಬ ಉದ್ಯೋಗ ಮಾಡುವುದು ಸರ್ವೇ ಸಾಮಾನ್ಯ. ಆದರೆ ರಿಕ್ಷಾ ಸಂಪಾದನೆಯ ಜೊತೆಗೆ ಪ್ರಯಾಣಿಕರ ಸೇವೆ ಮಾಡುವ ಮೂಲಕ ಉದ್ಯೋಗದೊಟ್ಟಿಗೆ ಸಮಾಜ ಸೇವೆಯ ಶ್ರೇಷ್ಠ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಿಮ್ಮೆಲ್ಲರನ್ನೂ ಕಾರ್ಮಿಕ ಇಲಾಖೆಗೆ ಸೇರಿಸಿ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸಿಕೊಡುವ ಪ್ರಯತ್ನದ ಜೊತೆಗೆ ಬೆಳ್ತಂಗಡಿ ಪಟ್ಟಣ ಪಂಚಾಯತ್ ಸಹಕಾರದೊಂದಿಗೆ ಮೇಲ್ಚಾವಣಿ ನಿರ್ಮಿತ ಸುಸಜ್ಜಿತವಾದ ರಿಕ್ಷಾ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಡುವುದಾಗಿ ಶಾಸಕ ಹರೀಶ್ ಪೂಂಜ ಭರವಸೆ ನೀಡಿದರು.
ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಜು. 29 ರಂದು ನಡೆದ ಅಟೋ ರಿಕ್ಷಾ ಚಾಲಕ ಮಾಲಕರ ಸಂಘ ಬೆಳ್ತಂಗಡಿ ಇದರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿದ ಅವರು ಸಂಘದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಶುಭ ಕೋರಿದರು. ಬೆಳ್ತಂಗಡಿ ಠಾಣಾ ಎಎಸ್‌ಐ ಅಶೋಕ್, ಟ್ರಾಫಿಕ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಚಂದ್ರಶೇಖರಯ್ಯ, ಸಬ್‌ಇನ್ಸ್‌ಪೆಕ್ಟರ್ ಓಡಿಯಪ್ಪ ಗೌಡ ಸಂಚಾರ ನಿಯಗಳ ಬಗ್ಗೆ ತಿಳಿಸಿದರು.
ನ್ಯಾಯವಾದಿಯಾಗಿದ್ದು ಸಂಘದ ಗೌರವಾಧ್ಯಕ್ಷರಾಗಿರುವ ಸಂತೋಷ್ ಕುಮಾರ್ ಲಾಲ, ಸಂಘದ ಬಗ್ಗೆ ಪ್ರಸ್ತಾವನೆಗೈದು ಸಂಘದ ಬೇಡಿಕೆ ಏನು ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು.ಸಂಘದ ಕಾರ್ಯದರ್ಶಿ ಸುರೇಶ್ ಪೂಜಾರಿ ಸಹಿತ ಎಲ್ಲಾ ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು. ಉಪಾಧ್ಯಕ್ಷ ರಮೇಶ್ ಪಾಂಗಾಳ ಸ್ವಾಗತಿಸಿದರು. ಜಯಾನಂದ ಲಾಯಿಲ ಕಾರ್ಯಕ್ರಮ ನಿರೂಪಿಸಿದರು. ಜಲಜಾ ಪ್ರಾರ್ಥನೆ ಹಾಡಿದರು. ಚರಣ್ ಕುಮಾರ್ ಧನ್ಯವಾದವಿತ್ತರು.
ಸಂಘದ ಸದಸ್ಯರಾಗಿದ್ದು ಈ ವರ್ಷದ ನಿಧನ ಹೊಂದಿದ ಆದಂ ಕಕ್ಯೇನ ಮತ್ತು ಸಂಘದ ಸದಸ್ಯರಾಗಿದ್ದು ಅಪಘಾತಕ್ಕೆ ತುತ್ತಾಗಿ ವಿಕಲಾಂಗರಾಗಿರುವ ಹರೀಶ್ಚಂದ್ರ ಅವರಿಗೆ ತಲಾ 25 ಕೆ.ಜಿ ಅಕ್ಕಿ ವಿತರಣೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.