ಸಾಂತೂರು ಶ್ರೀನಿವಾಸ ತಂತ್ರಿಯವರ ‘ದೇಗುಲ ದರ್ಶನ’ ಕೃತಿ ಬಿಡುಗಡೆ.

Advt_NewsUnder_1
Advt_NewsUnder_1
Advt_NewsUnder_1

ಉಜಿರೆ : ಕಿನ್ನಿಗೋಳಿಯಿಂದ ಪ್ರಕಟಗೊಳ್ಳುತ್ತಿರುವ ‘ಯುಗಪುರುಷ’ ಮಾಸ ಪತ್ರಿಕೆಯಲ್ಲಿ 9 ವರ್ಷಗಳ ಕಾಲ 108 ಸಂಚಿಕೆಯಲ್ಲಿ ಉಜಿರೆಯ ಪತ್ರಕರ್ತ ಸಾಂತೂರು ಶ್ರೀನಿವಾಸ ತಂತ್ರಿಯವರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಧಾರ್ಮಿಕ ದೇವಾಲಯಗಳ ಪರಿಚಯಾತ್ಮಕ ಸರಣಿ ಲೇಖನ ‘ದೇಗುಲ ದರ್ಶನ’ದಲ್ಲಿ ಪ್ರಕಟವಾಗಿತ್ತು. ಇದೀಗ ಯುಗಪುರುಷ ಪ್ರಕಟಣಾಲಯ ಹೊರ ತಂದ 108 ದೇವಾಲಯಗಳ ಸಂಗ್ರಹದ ‘ದೇಗುಲ ದರ್ಶನ’ ಕೃತಿಯನ್ನು ಜು.24 ರಂದು ಕಿನ್ನಿಗೋಳಿಯಲ್ಲಿ ನಡೆದ ಸಂಸ್ಥಾಪಕ ಕೊ.ಅ.ಉಡುಪರ ಸಂಸ್ಮರಣಾ ಸಮಾರಂಭದಲ್ಲಿ ಕ.ಸಾ.ಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅವರು ಕಟೀಲು ಗೋಪಾಲಕೃಷ್ಣ ಆಸ್ರಣ್ಣ, ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮತ್ತು ಗಣ್ಯರ ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಿದರು.
ಏರ್ಯ ಲಕ್ಷ್ಮೀನಾರಾಯಣ ಆಳ್ವರಿಗೆ ಕೊ.ಅ.ಉಡುಪ ಪ್ರಶಸ್ತಿ ಪ್ರದಾನ ಮಾಡಲಾಯಿತು. ‘ಯುಗಪುರುಷ’ ವತಿಯಿಂದ ಕೃತಿಕಾರ ಸಾಂತೂರು ಶ್ರೀನಿವಾಸ ತಂತ್ರಿಯವರನ್ನು ಗಣ್ಯ ಅತಿಥಿಗಳು ಶಾಲು ಹೊದಿಸಿ ಗೌರವಿಸಿ ಪುರಸ್ಕರಿಸಿದರು. ನಂದಳಿಕೆ ಬಾಲಚಂದ್ರ ರಾವ್ ಕೊ.ಅ.ಉಡುಪ ಸಂಸ್ಮರಣೆಗಯದರು. ಕೃತಿಕಾರ ತಂತ್ರಿಯವರು ಕ್ಷೇತ್ರಗಳ ಮಾಹಿತಿ ಸಂಗ್ರಹಣೆಯಲ್ಲಿ ನೆರವಾದ ಸರ್ವರನ್ನು ಕೃತಜ್ಞತೆಯಿಂದ ಸ್ಮರಿಸಿಕೊಂಡರು. ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.