ಆ.7 ರಿಂದ ಗುರುವಾಯನಕೆರೆಯಲ್ಲಿ ತೂಕ ಮತ್ತು ಅಳತೆ ಸಾಧನಗಳಿಗೆ ಸತ್ಯಾಪನಾ ಮುದ್ರೆ ಶಿಬಿರ.

ಬೆಳ್ತಂಗಡಿ: ಕಾನೂನು ಮಾಪನಶಾಸ್ತ್ರ ನಿರೀಕ್ಷಕರು, ಬಂಟ್ವಾಳ ಕಛೇರಿಯಿಂದ ತೂಕ ಮತ್ತು ಅಳತೆ ಸಾಧನಗಳ 2018ನೇ ಸಾಲಿನ ವಾರ್ಷಿಕ ಸತ್ಯಾಪನಾ ಮುದ್ರೆ ಶಿಬಿರವನ್ನು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ ಗುರುವಾಯನಕೆರೆಯಲ್ಲಿ ಆ.7 ರಿಂದ ಆ.10 ವರೆಗೆ ನಡೆಸಲಾಗುವುದು.
ಬೆಳ್ತಂಗಡಿ ಶಿಬಿರ ವ್ಯಾಪ್ತಿಯಲ್ಲಿನ ಪುಂಜಾಲಕಟ್ಟೆ, ಮಡಂತ್ಯಾರು, ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ, ಬೆಳಾಲು, ಕೊಯ್ಯೂರು, ಸೋಮಂತಡ್ಕ, ಮುಂಡಾಜೆ, ಕಕ್ಕಿಂಜೆ, ಚಾರ್ಮಾಡಿ, ನೆರಿಯ, ಗಂಡಿಬಾಗಿಲು, ದಿಡುಪೆ ಕಿಲ್ಲೂರು, ಕಾಜೂರು, ಅಳದಂಗಡಿ, ನಾರಾವಿ, ಪಡಂಗಡಿ, ಗೇರುಕಟ್ಟೆ, ಜಾರಿಗೆಬೈಲು ವ್ಯಾಪ್ತಿಯ ವ್ಯಾಪಾರಸ್ಥರು, ತೂಕ ಮತ್ತು ಅಳತೆ ಸಾಧನಗಳ ಬಳಕೆದಾರರು ತಾವು ಬಳಸುವ ತೂಕ ಮತ್ತು ಅಳತೆ ಸಾಧನಗಳನ್ನು ಶಿಬಿರಕ್ಕೆ ಹಾಜರುಪಡಿಸಿ ಮುದ್ರೆ ಹಾಕಿಸಬೇಕು. ಎಲೆಕ್ಟ್ರಾನಿಕ್ ತೂಕದ ಯಂತ್ರಗಳ ಬಳಕೆದಾರರು ಸತ್ಯಾಪನೆ ಮುದ್ರೆಗೆ ಕಡ್ಡಾಯವಾಗಿ ತೂಕದ ಯಂತ್ರಗಳನ್ನೇ ಹಾಜರುಪಡಿಸತಕ್ಕದ್ದು. ಕೇವಲ ಸೀಲಿನ ಪಟ್ಟಿಗಳಿಗೆ ಮುದ್ರೆ ಹಾಕಲಾಗುವುದಿಲ್ಲ ಎಂದು ಕಾನೂನು ಮಾಪನಾ ಶಾಸ್ತ್ರ ನಿರೀಕ್ಷಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.