ಗುರುವಾಯನಕೆರೆ ಕೆರೆಯಲ್ಲಿ ಬೆಂಗಳೂರಿನ ವಿದ್ಯಾರ್ಥಿಯ ಶವ ಪತ್ತೆ.

Advt_NewsUnder_1
Advt_NewsUnder_1
Advt_NewsUnder_1

ಗುರುವಾಯನಕೆರೆ : ಇಲ್ಲಿಯ ಗುರುವಾಯನಕೆರೆ ಕೆರೆಯಲ್ಲಿ ಬೆಂಗಳೂರಿನ ಶಾಲಾ ವಿದ್ಯಾರ್ಥಿಯೋರ್ವನ ಶವ ಇಂದು(ಜು.26) ಬೆಳಿಗ್ಗೆ ಪತ್ತೆಯಾಗಿದೆ.
ಜು.25 ರಂದು ಕೆರೆಯ ಬಳಿ ಅನಾಥವಾಗಿ ಬ್ಯಾಗ್ ಹಾಗೂ ಚಪ್ಪಲಿ ಕಂಡ ಸ್ಥಳೀಯರು ಹಾಗೂ ತಾ.ಪಂ ಸದಸ್ಯ ಗೋಪಿನಾಥ ನಾಯಕ್ ಬೆಳ್ತಂಗಡಿ ಪೊಲೀಸರಿಗೆ ಮತ್ತು ಬೆಳ್ತಂಗಡಿ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ಬ್ಯಾಗ್‌ನ್ನು ಪರಿಶೀಲಿಸಿದಾಗ ಬ್ಯಾಗ್‌ನಲ್ಲಿ ಶಾಲಾ ವಿದ್ಯಾರ್ಥಿಯೋರ್ವನ ಗುರುತಿನ ಚೀಟಿ ಪತ್ತೆಯಾಗಿತ್ತು. ಚೀಟಿಯಲ್ಲಿ ಯಶವಂತ ಸಾಯಿ ಕೆ.ಪಿ, 9ನೇ ತರಗತಿ, ತಂದೆ ಎನ್.ವಿ ಪ್ರೇಮ್ ಕುಮಾರ್ ಐಟಿಐ ವಿದ್ಯಾಮಂದಿರ ಸ್ಕೂಲ್ ದೂರವಾಣಿ ನಗರ ಬೆಂಗಳೂರು ಎಂದಿದೆ. ಮನೆ ವಿಳಾಸದಲ್ಲಿ ಮುನಿಸ್ವಾಮಿ ಶೆಟ್ಟಿ ಲೇಔಟ್, ಶ್ರೀ ಶಿರ್ಡಿ ವಿನಾಯಕ ದೇವಸ್ಥಾನ ಹಿಂಭಾಗ ಭಂಗಿನಿ ಹೋಟೆಲ್ ಬೆಂಗಳೂರು ಎಂದು ಬರೆದಿತ್ತು. ಹಲವಾರು ಸಂಶಯಗಳ ಹಿನ್ನಲೆಯಲ್ಲಿ ಬೆಳ್ತಂಗಡಿ ಅಗ್ನಿಶಾಮಕದವರು ಬೋಟ್ ತರಿಸಿ ಕೆರೆಯಲ್ಲಿ ವ್ಯಾಪಕ ಶೋಧ ಕಾರ್ಯ ನಡೆಸಿದ್ದರು. ಇಂದು (ಜು.26) ಬೆಳಿಗ್ಗೆ ಬಾಲಕನ ಮೃತದೇಹ ನೀರಿನಲ್ಲಿ ತೇಲುವ ಸ್ಥಿತಿಯಲ್ಲಿ ಕಂಡುಬಂದಿದ್ದು, ಮೃತದೇಹವನ್ನು ಅಗ್ನಿಶಾಮಕ ದಳದವರು ನೀರಿನಿಂದ ಮೇಲಕ್ಕೆ ತೆಗೆದಿದ್ದಾರೆ.

ವಿದ್ಯಾರ್ಥಿ ಬೆಂಗಳೂರಿನಿಂದ ಚಾರ್ಮಾಡಿ ಮೂಲಕ ಮಂಗಳೂರಿಗೆ ಜು.24ರಂದು ಬೆಳಗ್ಗೆ 10ಕ್ಕೆ ಬಸ್ಸಿನ ಟೀಕೇಟು ಪಡೆದಿದ್ದು, ಸಂಜೆ 6.00ಕ್ಕೆ ಬೆಳ್ತಂಗಡಿ-ಕಾರ್ಕಳಕ್ಕೆ ಹೋಗುವ ಬಸ್ಸಿನ ಟಿಕೇಟು ಪಡೆದುಕೊಂಡಿದ್ದಾನೆ. ಎರಡು ಟಿಕೇಟುಗಳು ಬ್ಯಾಗ್‌ನಲ್ಲೇ ಇದೆ.

ಶೋಧ ಕಾರ್ಯದ ವೇಳೆ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಬಾಲಕನ ಸಾವಿನ ಬಗ್ಗೆ ತನಿಖೆ ನಡೆಯುತ್ತಿದ್ದು, ಸರಿಯಾದ ಮಾಹಿತಿ ತಿಳಿದುಬಂದಿಲ್ಲ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.