ನಾಟಿ ಪಂಡಿತ, ಸತಾಯುಷಿ ಹಸನಬ್ಬ ಮುರತ್ತಗುಂಡಿ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕಿಲ್ಲೂರು: ಇಲ್ಲಿನ ಮರತ್ತಗುಂಡಿ ನಿವಾಸಿ, ನಾಟಿ ಪಂಡಿತ ಸತಾಯುಷಿ ಹಸನಬ್ಬ ಮುರತ್ತಗುಂಡಿ (102 ವ.) ಅವರು ಜು. 21 ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಹಸನಬ್ಬ ಅವರಿಗೆ 102 ವರ್ಷ ಪ್ರಾಯವಾಗಿದ್ದು ವಯೋಸಹಜ ಅನಾರೋಗ್ಯಗಳಿತ್ತಾದರೂ ಸದಾ ಲವಲವಿಕೆಯಿಂದ ಇದ್ದರು. ಸ್ವಾಭಿಮಾನಿಯಾಗಿದ್ದ ಅವರು ತನ್ನ ಎಲ್ಲಾ ದೈನಂದಿನ ಕೆಲಸ ಕಾರ್ಯಗಳನ್ನು ಕೊನೆಯ ದಿನಗಳವರೆಗೂ ಅವರೇ ಮಾಡಿಕೊಳ್ಳುತ್ತಿದ್ದರು.
ಅವರ ಹಳ್ಳಿಪಂಡಿತರಾಗಿ ಗುರುತಿಸಿಕೊಂಡಿದ್ದು, ತನ್ನ ಬಳಿ ಬರುತ್ತಿದ್ದ ಅನೇಕ ಮಂದಿಗೆ ಕೆಂಪು, ಸೋಕುಗಳು, ಇತರ ಕಾಯಿಲೆಗಳಿಗೆ ನಾಟಿ ಔಷಧಿ ನೀಡುತ್ತಿದ್ದರು.
ಮೃತರ ಪತ್ನಿ ಬೀಫಾತಿಮಾ ಈ ಮೊದಲೇ ಮೃತರಾಗಿದ್ದು, ಇದೀಗ ಮಕ್ಕಳಾದ ಜೈನಾಬಿ, ನೆಬಿಸಾ, ಅಬೂಬಕ್ಕರ್, ಇಸ್ಮಾಯಿಲ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರವನ್ನು ಕಿಲ್ಲೂರು ಮಸೀದಿ ವಠಾರದಲ್ಲಿ ನೆರವೇರಿಸಲಾಗಿದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.