ಶಿರೂರು ಶ್ರೀ ಸಾವು ಪ್ರಕರಣ: ಅಳದಂಗಡಿಯಲ್ಲಿ ರಮ್ಯ ಶೆಟ್ಟಿ ಬಂಧನ.

ಅಳದಂಗಡಿ: ಶಿರೂರು ಶ್ರೀ ಅಸಹಜ ಸಾವು ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಲಾಗಿದ್ದ ಶಿರೂರು ಶ್ರೀ ಆಪ್ತೆ  ರಮ್ಯಾ ಶೆಟ್ಟಿ ಯವರನ್ನು ವೇಣೂರು ಪೊಲೀಸರು ಇಂದು (ಜು.24) ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಮ್ಯಾರವರು ಬುರ್ಖಾ ಧರಿಸಿಕೊಂಡು ಮೂವರು ಮಹಿಳೆಯರ ಜತೆ ಎರ್ಟಿಗಾ ಕಾರ್‌ನಲ್ಲಿ ಪರಾರಿಯಾಗುತ್ತಿದ್ದರು. ಈ ಸಂಧರ್ಭದಲ್ಲಿ ಅಳದಂಗಡಿ ಶ್ರೀ ಸತ್ಯದೇವತೆ ದೇವಸ್ಥಾನ ಬಳಿ  ಅವರ ಕಾರ್ ಪಂಕ್ಚರ್ ಆಗಿದ್ದು, ಗ್ಯಾರೇಜ್ ಅಂಗಡಿ ಪಕ್ಕ ನಿಂದಿದ್ದ ಕಾರನ್ನು ಕಂಡು ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಉಡುಪಿ ಪೊಲೀಸರ ಸೂಚನೆ ಮೇರೆಗೆ ಅವರ ಕಾರ್ ಹಿಂಬಾಲಿಸಿಕೊಂಡು ಬಂದಿದ್ದ ವೇಣೂರು ಪೊಲೀಸರು ರಮ್ಯಾ ರವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ರಮ್ಯಾ ಶೆಟ್ಟಿ ಸೇರಿದಂತೆ ಐವರನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಅವರನ್ನು ಉಡುಪಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಶಿರೂರು ಸ್ವಾಮಿಗಳ ಸಾವಿನ ಪ್ರಕರಣದಲ್ಲಿ ಮಹಿಳೆಯರ ಕೈವಾಡ ಇರುವ ಶಂಕೆಯಿದ್ದು, ರಮ್ಯಾ ರವರು ಪ್ರತಿ ಸೋಮವಾರ ಶ್ರೀಗಳಿಗೆ ಊಟ ತಂದುಕೊಡುತ್ತಿದ್ದರು ಎನ್ನಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.