ಶಿಶಿಲ ಬೈರಾಪುರ ರಸ್ತೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಕಾರ್ಯಕ್ರಮ .

ಬೆಳ್ತಂಗಡಿ: ಚಾರ್ಮಾಡಿ ಘಾಟ್ ರಸ್ತೆಗೆ ಪರ್ಯಾಯವಾಗಿ ಶಿಶಿಲ ಬೈರಾಪುರ ಮೂಲಕ ದ.ಕ ಜಿಲ್ಲೆಯಿಂದ ಚಿಕ್ಕಮಗಳೂರು ಜಿಲ್ಲೆಗೆ ನೇರ ಸಂಪರ್ಕಕ್ಕೆ ಸಾಧ್ಯತೆ ಇರುವ ಬಗ್ಗೆ ಈಗಾಗಲೇ ಅಧಿಕಾರಿಗಳ ಗಮನಸೆಳೆದಿರುವಂತೆ, ಸದ್ರಿ ರಸ್ತೆ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರ ಇಲಾಖೆಯವರು ನೀಲಿ ನಕಾಶೆ ಮತ್ತು ಯೋಜನಾ ನಕಾಶೆ ತಯಾರಿಸಿದ್ದು, ಈ ನಕಾಶೆ ಮತ್ತು ರಸ್ತೆ ನಿರ್ಮಾಣದಿಂದ ಆಗಬಹುದಾದ ಸಾಧಕ ವಿಚಾರಗಳನ್ನು ಪವರ್ ಪೊಯಿಂಟ್ ಮೂಲಕ ಮಾಹಿತಿ ಕಾರ್ಯಕ್ರಮ  ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜು.22 ರಂದು ಜರುಗಿತು.

ಈ ಮಾಹಿತಿ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು, ವಿಧಾನ ಸಭಾ ಶಾಸಕ ಸಿ.ಟಿ ರವಿ , ವಿಧಾನ ಪರಿಷತ್ ಶಾಸಕ ಎಸ್.ಎಲ್ ಭೋಜೇ ಗೌಡ ಹಾಗೂ ಇತರ ಜನಪ್ರತಿನಿದಿಗಳು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.