HomePage_Banner_
HomePage_Banner_

ಬೆಳ್ತಂಗಡಿ ಲಯನ್ಸ್ ಕ್ಲಬ್ ಪದಗ್ರಹಣ.

ಬೆಳ್ತಂಗಡಿ: ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್ ಬೆಳ್ತಂಗಡಿ ಇದರ 2018-19 ನೇ ಸಾಲಿನ ಮೇದಿನಿ ಡಿ ಗೌಡ ತಂಡದ ಪದಗ್ರಹಣ ಸಮಾರಂಭವು ಜು. 21 ರಂದು ವಾಣಿ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ಜರುಗಿತು. ಪದಗ್ರಹಣ ಅಧಿಕಾರಿಯಾಗಿ ಲಯನ್ಸ್ ಜಿಲ್ಲಾ ಉಪರಾಜ್ಯಪಾಲ ಡಾ|ಗೀತ್‌ಪ್ರಕಾಶ್ ವಿಟ್ಲ ಉಪಸ್ಥಿತರಿದ್ದರು.
2017-18 ರ ಅಧ್ಯಕ್ಷ ಧರಣೇಂದ್ರ ಕೆ ಜೈನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ ಶಿಕ್ಷಣ ಸಂಯೋಜಕ ಬಾಜಿಮಾರು ಬಾಬು ಗೌಡ, ಡಾ| ಗೀತ್‌ಪ್ರಕಾಶ್ ರವರ ಪತ್ನಿ ಡಾ| ಗಾಯತ್ರಿ, ಲಯನ್ಸ್ ವಲಯಾಧ್ಯಕ್ಷರುಗಳು, ವಲಯದ 6 ಕ್ಲಬ್‌ಗಳ ಅಧ್ಯಕ್ಷರುಗಳು, ಬೆಳ್ತಂಗಡಿ ಕ್ಲಬ್‌ನ ಕೋಶಾಧಿಕಾರಿ ವಿನ್ಸೆಂಟ್ ಟಿ ಡಿಸೋಜಾ ಉಪಸ್ಥಿತರಿದ್ದರು.

ನಿರ್ಗಮಿತ ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ ವರದಿ ವಾಚಿಸಿ, ನೂತನ ಕಾರ್ಯದರ್ಶಿ ರಾಮ ಪಿ ಸಾಲಿಯಾನ್ ಮತ್ತು ಕೋಶಾಧಿಕಾರಿ ಮಂಜುನಾಥ ಜಿ ಸಹಿತ ಪದಾಧಿಕಾರಿಗಳು ಸಹಕಾರ ನೀಡಿದರು. ಕೃಷ್ಣ ಆಚಾರ್ ಅತಿಥಿಗಳನ್ನು ಬರಮಾಡಿಕೊಂಡರು. ಅತಿಥಿಗಳ ಪರಿಚಯವನ್ನು ಅಶ್ರಫ್ ಆಲಿಕುಂಞಿ ಮತ್ತು ಸುಭಾಶ್ಚಂದ್ರ ಎಂ.ಪಿ, ಹೊಸ ಪದಾಧಿಕಾರಿಗಳ ಪರಿಚಯವನ್ನು ವಸಂತ ಸುವರ್ಣ ಮಾಡಿದರು. ನಿತ್ಯಾನಂದ ನಾವರ, ರಾಮಕೃಷ್ಣ ಗೌಡ ಜವಾಬ್ಧಾರಿಗಳನ್ನು ನಿರ್ವಹಿಸಿದರು.
ಅಧಿಕಾರ ಪದ ಸ್ವೀಕರಿಸಿದ ನೂತನ ಅಧ್ಯಕ್ಷೆ ಮೇದಿನಿ ಡಿ ಗೌಡ ಮಾತನಾಡಿ, ಎಲ್ಲರ ಸಹಕಾರದೊಂದಿಗೆ ಈ ವರ್ಷ ಉತ್ತಮ ಕೆಲಸಗಳನ್ನು ಮಾಡುವ ಯೋಚನೆ ಇದೆ. ಹಿಂದಿನಂತೆ ಜೊತೆಯಿರಲು ಕೇಳಿಕೊಂಡರು. ಸೇವಾ ಚಟುವಟಿಕೆ ಉದ್ಘಾಟಿಸಲಾಯಿತು. ಸೈನಿಕರ ನಿಧಿಗೆ ಚಾಲನೆ ನೀಡಲಾಯಿತು. ಅರ್ಹ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ನಡೆಯಿತು. ಸೀತಾಲಕ್ಷ್ಮೀ ದಿನೇಶ್ ಪ್ರಾರ್ಥನೆ ಹಾಡಿದರು. ವಿ. ಆರ್ ನಾಯಕ್ ಧ್ವಜವಂದನೆ ನಡೆಸಿದರು. ಸಭೆಯ ಬಳಿಕ ನೃತ್ಯ ವೈಭವ ಪ್ರದರ್ಶನಗೊಂಡಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.