ಗುರುವಾಯನಕೆರೆ: ಇಲ್ಲಿಯ ಗುರುವಾಯನಕೆರೆ ದುರ್ಗಾ ಸರ್ವಿಸ್ ಸ್ಟೇಷನ್ ಬಳಿ ಉಪ್ಪಿನಂಗಡಿ ರಸ್ತೆಯಲ್ಲಿ ಜು.17 ರಂದು ಜೆ.ಪಿ ಫಾಸ್ಟ್ಫುಡ್ ಶುಭಾರಂಭಗೊಂಡಿತು.
ಕುವೆಟ್ಟು ಗ್ರಾ.ಪಂ ಅಧ್ಯಕ್ಷ ಅಶೋಕ್ ಕೋಟ್ಯಾನ್ ಉದ್ಘಾಟನೆಯನ್ನು ನೆರವೇರಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ ಮಾಜಿ ಅಧ್ಯಕ್ಷ ಪೂವಪ್ಪ ಭಂಡಾರಿ, ಮುಕೇಶ್ ಶೆಟ್ಟಿ ತಿಮರೋಡಿ, ಮೋಹನ್ ಶೆಟ್ಟಿ ತಿಮರೋಡಿ, ಹುಂಡೈನ ಸೇಲ್ಸ್ ಮ್ಯಾನೇಜರ್ ಗಂಗಾಧರ ಪರಾರಿ, ಅಕ್ಷಯ ಎಲೆಕ್ಟ್ರಿಕಲ್ಸ್ ಮಾಲಕ ಪುರಂದರ ಶೆಟ್ಟಿ, ಶ್ರೀದೇವಿ ಇಂಜಿಯರಿಂಗ್ ವರ್ಕ್ಸ್ನ ತಾರನಾಥ, ಬಾಲಕೃಷ್ಣ ಮಡಂತ್ಯಾರು ಉಪಸ್ಥಿತರಿದ್ದರು.
ಬಂದಂತಹ ಅತಿಥಿ ಗಣ್ಯರನ್ನು ಮಾಲಕರಾದ ಶ್ರೀಮತಿ ಪ್ರತಿಮಾ ಮತ್ತು ಜಯಪ್ರಕಾಶ ಶೆಟ್ಟಿ ದಂಪತಿ ಸ್ವಾಗತಿಸಿ ಸತ್ಕರಿಸಿದರು.