HomePage_Banner_
HomePage_Banner_
HomePage_Banner_

ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ: ಮಕ್ಕಳ ಧ್ವನಿ – ಅಧ್ಯಕ್ಷತೆಗೆ ಆಹ್ವಾನ.

Advt_NewsUnder_1

ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ವತಿಯಿಂದ ವಾಣಿ ಪದವಿ ಪೂರ್ವ ಕಾಲೇಜು, ಬೆಳ್ತಂಗಡಿಯಲ್ಲಿ ಇಪ್ಪತ್ತೈದನೇ ಮಕ್ಕಳ ಧ್ವನಿ ಕಾರ್ಯಕ್ರಮವು ಸೆಪ್ಟಂಬರ್ ತಿಂಗಳಲ್ಲಿ ನಡೆಯಲಿದ್ದು, ಮಕ್ಕಳ ಧ್ವನಿ ಸಮಾರಂಭದಲ್ಲಿ ಅಧ್ಯಕ್ಷತೆ, ಕವಿಗೋಷ್ಠಿ ಮತ್ತು ಕಥಾಗೋಷ್ಠಿಗಳ  ಅಧ್ಯಕ್ಷ ಸ್ಥಾನವನ್ನು ವಹಿಸಲು ಆಸಕ್ತರಾದ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ಹೆಸರನ್ನು ತಾ.26/07/2018ರ ಒಳಗೆ ತಲುಪುವಂತೆ  ಬಿ.ಶ್ರೀನಿವಾಸ ರಾವ್, ಅಧ್ಯಕ್ಷರು, ದ.ಕ.ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ (ರಿ) ಕಲ್ಲಾವು ‘ಬಿ’ ಮನೆ, ಉರ್ವ, ಮಂಗಳೂರು-575006 (ದೂರವಾಣಿ : 0824-2457971 ಇವರಿಗೆ ಕಳುಹಿಸಿಕೊಡುವುದು.

ಅಲ್ಲದೆ ತಮ್ಮ ಪ್ರತಿಭಾ ಸಾಧನೆಗಳ ವಿವರಗಳನ್ನೊಳಗೊಂಡ ಪತ್ರವನ್ನು ಆಯಾ ಶಾಲೆ, ಕಾಲೇಜುಗಳ ಮುಖ್ಯಸ್ಥರಿಂದ ದೃಢೀಕರಿಸಿ, ದಿನಾಂಕ:29/07/2018 ರಂದು ಪೂರ್ವಾಹ್ನ ಗಂಟೆ 10.00ರಿಂದ ವಾಣಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿಯಲ್ಲಿ ನಡೆಯಲಿರುವ ಸಂದರ್ಶನಕ್ಕೆ ಹಾಜರಾಗುವಾಗ ತರುವಂತೆ ಕೋರಲಾಗಿದೆ. ಅಭ್ಯರ್ಥಿಗಳಿಗೆ ಕನ್ನಡ ಭಾಷೆಯಲ್ಲಿ ಲಿಖಿತ ಸಾಹಿತ್ಯಿಕ ರಸ ಪ್ರಶ್ನೆ ಮತ್ತು ಆಶುಭಾಷಣ ಸ್ಪರ್ಧೆಗಳಿರುತ್ತದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.