“ಮರೆಯಲಾಗದ ಘಟನೆಗಳು”

ಸುಮಂತ್ ಶೆಟ್ಟಿ ದ್ವಿತೀಯ ಪಿಯು ಸೇ.ಹಾ.ಪ.ಪೂ. ಮಹಾವಿದ್ಯಾಲಯ ಮಡಂತ್ಯಾರು.

ಕಾಲೇಜು ಜೀವನ ಎನ್ನುವುದು ಒಂದು ಸುಮಧುರ ನೆನಪುಗಳ ಬುತ್ತಿ. ಈ ಬುತ್ತಿಯ ತುಂಬಾ ಗೆಳೆಯರೊಂದಿಗೆ ಮಾಡಿದ ತರಲೆ-ತಮಾಷೆಗಳೇ ತುಂಬಿರುತ್ತವೆ. ನನ್ನ ಪಿಯುಸಿ ಜೀವನವನ್ನೊಮ್ಮೆ ಮೆಲುಕು ಹಾಕಿದಾಗ ಮುಖದಂಚಿನಲ್ಲಿ ಮುಗುಳ್ನಗೆ ಮೂಡಿಸುವ ಘಟನೆಗಳಿವು:
ಕಾಲೇಜ್ ಎಲೆಕ್ಷನ್ ದಿನ ರಾಜಕಾರಣಿಗಳಿಗಿಂತಲೂ ಹೆಚ್ಚು ಓಡಾಡಿದ್ದು, ಆಜನ್ಮ ವೈರಿಗಳಂತೆ ವರ್ತಿಸಿದ್ದು, ಮರುದಿನ ಎಲ್ಲಾ ಮರೆತು ಒಂದಾಗಿದ್ದು, ಬೇರೆ ತರಗತಿಯ ಗೆಳೆಯರನ್ನು ಕರೆತಂದು ಅಧ್ಯಕ್ಷ ಪಟ್ಟದಲ್ಲಿ ಕೂರಿಸಿ ಚೆನ್ನಾಗಿ ಬಾರಿಸಿದ್ದು, ಒಂದು ಸುತ್ತು ಹಾಕಿ ಬರುವುದನ್ನು ತಪ್ಪಿಸಲು ಕಾಲೇಜ್ ಕೌಂಪೌಂಡ್ ಹಾರಿ ಬರುತ್ತಿದ್ದದ್ದು,ಕ್ರೀಡಾ ದಿನದಂದು ಭಿನ್ನ-ವಿಭಿನ್ನ ಸ್ಲೋಗನ್‌ಗಳ ಮುಖಾಂತರ ನಮ್ಮ ತಂಡದ ಆಟಗಾರರನ್ನು ಪ್ರೋತ್ಸಾಹಿಸಿದ್ದು; ಸಾಂಸ್ಕೃತಿಕ ದಿನದಂದು ಉತ್ತಮ ಪ್ರದರ್ಶನ ನೀಡಿದರೂ ಪ್ರಶಸ್ತಿ ಸಿಗದ್ದಿದ್ದಕ್ಕೆ ಬೇಜಾರಾಗಿದ್ದು, ತರಗತಿ ತಪ್ಪಿಸುವುದಕ್ಕಾಗಿ ಕಾಲೇಜ್ ಡೇಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೇರುತ್ತಿದ್ದದ್ದು, ಎರಡು ವರ್ಷಗಳ ಪಿಯುಸಿ ಜೀವನದಲ್ಲಿ ಒಂದೇ ಬಾರಿ ಪಿ.ಟಿ. ಅವಧಿ ದೊರೆತಾಗ ವಿಶ್ವವನ್ನೇ ಗೆದ್ದಷ್ಟು ಖುಷಿಪಟ್ಟದ್ದು. ಭಾರತ ತಂಡದ ಪಂದ್ಯ ಇದ್ದಾಗ ಮೊಬೈಲ್‌ನಲ್ಲಿ ಸ್ಕೋರ್ ನೋಡಿ ಚೀಟಿಯಲ್ಲಿ ಬರೆದು ತರಗತಿಯಿಡೀ ಹಂಚಿದ್ದು(ತರಗತಿ ನಡೆಯುತ್ತಿದ್ದಾಗಲೇ). ಊಟವಾದ ತಕ್ಷಣ ಎಲ್ಲರೂ ಒಟ್ಟಾಗಿ pen shot, hand cricket ಆಡಿದ್ದು…..
ಹೀಗೆ ಬರೆಯುತ್ತಾ ಹೋದರೆ ಪುಟಗಳೇ ಸಾಲುವುದಿಲ್ಲ. ಒಂದು ಅಧ್ಯಾಯ ಮುಗಿದ ಬಳಿಕವೇ ಮತ್ತೊಂದು ಅಧ್ಯಾಯ ಆರಂಭಗೊಳ್ಳುವಂತೆ ಜೀವನದ ಒಂದು ಘಟ್ಟವನ್ನು ದಾಟಿ, ಮತ್ತೊಂದು ಘಟ್ಟಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಗೆಳೆಯರ ಅಗಲುವಿಕೆ ಅನಿವಾರ್ಯ. ಆದರೆ ಅವರೊಂದಿಗೆ ಕಳೆದ ಕ್ಷಣಗಳು ಎಂದಿಗೂ ಮರೆಯಲಾಗದಂತದ್ದು. ಕೊನೆಗೊಂದು ಮಾತು
“Thank you friends”

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.