ಕಾಲೇಜು ಬಂಕ್ ಮಾಡಿದ ಕ್ಷಣಗಳು.

 ಭರತ್ ಕುಮಾರ್ ಬಂದಾರು  

ಹ್ಹಾ! ಕಾಲೇಜ್ ಅಂದ್ರೆ ಸುಮ್ನೇನಾ ಪ್ರತಿ ವ್ಯಕ್ತಿಗೂ ಕಾಲೇಜು ಘಟ್ಟ ಎಂದರೆ ಜೀವನದಲ್ಲಿ ಮರೆಯಲಾಗದ ಕ್ಷಣಗಳು. ಜೀವನದಲ್ಲಿ ಪ್ರತಿ ಕ್ಷಣವೂ ನೆನೆಯುವಾಂತಾಗಿರುತ್ತದೆ. ಕಾಲೇಜಿನ ಪ್ರಾರಂಭದ ಅವಧಿಯಲ್ಲಿ ಪರಸ್ಪರ ಮುಖದ ಮುಗುಳು ನಗೆಯಿಂದ ಪ್ರಾರಂಭವಾಗುವ ಸ್ನೇಹ ಕ್ರಮೇಣ ಕೈ ಸೇರಿ ಸರಪಳಿಯಂತೆ ಸ್ನೇಹಿತರ ಗುಂಪು ಬಿಡಿಸಲಾಗದ ಸಂಬಂಧಕ್ಕೆ ಮನಸೋತು ಗಟ್ಟಿಯಾಗಿ ಬಿಡುತ್ತದೆ. ಆ ಕ್ಷಣಗಳೇ ಅಮೂಲ್ಯ. ಕಾಲೇಜು ಪ್ರಾರಂಭದಲ್ಲಿ ಶಿಕ್ಷಕರ ಮಾತಿಗೆ ಹೆದರುವ ನಾವು ಕ್ರಮೇಣ ಶಿಕ್ಷಕರೊಂದಿಗೆ ಸ್ನೇಹ ಬೆಳೆಸಿ ಶಿಕ್ಷಕರು ತರಗತಿಯಲ್ಲಿ ಇಲ್ಲದಿದ್ದಾಗ ಅವರು ಹೀಗೆ, ಇವರು ಹಾಗೆ ಎಂದು ಅವರ ಪಾತ್ರವನ್ನು ನಟಿಸುವುದು ತಪ್ಪಿದಲ್ಲ. ಅವರ ಪಾಠ ಬೋರ್ ಹೊಡೆದಾಗ ಎಂಚಿನ ಸಾವ್ಯ ಪೋಪುನಲ ಇಜ್ಜೆ ಎಂದು ಗೊಣಗುವುದು ಸಾಮಾನ್ಯ ಕೆಲವೊಮ್ಮೆ ಕಾಲೇಜಿಗೆ ಬಂಕ್ ಮಾಡಿ ಬೆಳ್ತಂಗಡಿ ತಾಲೂಕಿನ ಪ್ರವಾಸಿ ತಾಣಗಳಿಗೆ ಹೋಗದಿದ್ದರೆ ಕಾಲೇಜು ಜೀವನದಲ್ಲಿ ಏನು ಸಂತೋಷವಿರುತ್ತದೆ. ಎರ್ಮೈಯಿ ಫಾಲ್ಸ್‌ನ ಕಲ್ಲಿನ ರಾಣಿಯಲ್ಲಿ ನಿಂತು ಹೆಸರನ್ನು ಗೀಚುವುದು, ನೀರಿನಲ್ಲಿ ಆಟವಾಡುವುದು, ಜಲಪಾತದ ಜಲಧಾರೆಯ ಎದುರು ನಿಂತು ಸೆಲ್ಫಿ ತೆಗೆಯುವುದು ಖುಷಿ, ಪಡುವುದು, ಟಿಪಿನ್ ಮಾಡುವುದು ಆಹಾ! ಎಂತಹ ಮರೆಯಲಾಗದ ಕ್ಷಣಗಳು ಗಡಾಯಿ ಕಲ್ಲು ಮುಂತಾದ ಸ್ಥಳಗಳಿಗೆ ಭೇಟಿ ನೀಡಿ ಮತ್ತೇ ಅದೇ ಕ್ಷಣವನ್ನು ನೆನೆಯುವುದು. ಇಂತಹ ಕ್ಷಣ ಕೋಟಿ ಕೊಟ್ಟರೂ ಮತ್ತೆ ಸಿಗಲಾರದು. ಆ ಕ್ಷಣಗಳನ್ನು ನೆನೆದರೆ ಈಗ ಕಣ್ಣೀರು ಹರಿದು ಬರುತ್ತದೆ. ಶಿಕ್ಷಕರಿಗೆ ಬೈದ ಮಾತುಗಳು ಈಗ ಕ್ಷಮೆ ಕೇಳುತ್ತವೆ. ತಂದೆ,ತಾಯಿ, ಗುರುಗಳು ದೇವರಿದ್ದಂತೆ ಅವರಿಗೆ ನಾವು ಯಾವಾಗಲು ಚಿರಋಣಿಯಾಗಿರಬೇಕು. ನಾವು ಏನೇ ಸಾಧನೆ ಮಾಡಿದರು ಅದು ಗುರು ಹಿಂದೆ ನೀಡಿದ್ದ ಬೆಂಬಲ ಕಾರಣವಾಗುತ್ತದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.