ನಗರ ಪಂಚಾಯತ್ ಪ್ರಭಾರ ಹೆಲ್ತ್ ಇನ್ಸ್‌ಪೆಕ್ಟರ್ ಕೃಷ್ಣ ನಾಯ್ಕ ನಿಧನ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್‌ನಲ್ಲಿ ಬಿಲ್ ಕಲೆಕ್ಟರ್ ಆಗಿದ್ದು ಪ್ರಭಾರ ನೆಲೆಯಲ್ಲಿ ಹೆಲ್ತ್ ಇನ್ಸ್‌ಪೆಕ್ಟರ್ ಆಗಿದ್ದ ಕೃಷ್ಣ ನಾಯ್ಕ (55.ವ) ಅವರು ಅನಾರೋಗ್ಯದಿಂದ ವಿಟ್ಲ ಅಡ್ಯನಡ್ಕ ಚೌರ್‌ಕಾಡು ಸ್ವಗೃಹದಲ್ಲಿ ಜು. 13 ರಂದು ನಿಧನರಾಗಿದ್ದಾರೆ.
ಪುತ್ತೂರು ಪುರಸಭೆಯಲ್ಲಿ ಪೌರ ಕಾರ್ಮಿಕರಾಗಿ ಸೇವೆ ಪ್ರಾರಂಭಿಸಿದ್ದ ಅವರು ಪದೋನ್ನತಿಹೊಂದಿ ಸ್ಯಾನಿಟಿ ಸೂಪರ್‌ವೈಸರ್ ಆಗಿದ್ದರು. ಆ ಬಳಿಕ ಮತ್ತೊಮ್ಮೆ ಪದೋನ್ನತಿಹೊಂದಿ ಬೆಳ್ತಂಗಡಿ ಪಟ್ಟಣ ಪಂಚಾಯತ್‌ನಲ್ಲಿ ಬಿಲ್ ಕಲೆಕ್ಟರ್ ಆಗಿದ್ದರು. ಕರ್ತವ್ಯದ ನಿಮಿತ್ತ ಅವರು ನಗರದ ಸರಕಾರಿ ವಸತಿನಿಲಯದಲ್ಲಿ ಪತ್ನಿ ಮಕ್ಕಳ ಜೊತೆ ವಾಸವಾಗಿದ್ದರು. ಸರಳ ಸಜ್ಜನಿಕೆ ಮತ್ತು ಪ್ರಾಮಾಣಿಕ ವ್ಯಕ್ತಿತ್ವದವರಾಗಿದ್ದ ಅವರು ಜನಪ್ರತಿನಿಧಿಗಳು ಹಾಗೂ ಅಧಿಕಾರಿವರ್ಗದವರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು.
ಇತ್ತೀಚಿನ ಕೆಲ ಸಮಯದಿಂದ ಕಿಡ್ನಿ ತೊಂದರೆಗೊಳಗಾಗಿದ್ದ ಅವರು ಡಯಾಲಿಸಿಸ್ ಚಿಕಿತ್ಸೆಗೊಳಗಾಗುತ್ತಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.