ಸಿರಿ ಸಂಸ್ಕೃತಿ ಪ್ರೀಮಿಯಂ ಅಗರಬತ್ತಿಯ ಬಿಡುಗಡೆ.

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಸಿರಿ ಸಂಸ್ಕೃತಿ (4ಇನ್1) ಪ್ರೀಮಿಯಂ ಅಗರಬತ್ತಿ ಉತ್ಪನ್ನವನ್ನು ಜು.16 ರಂದು ಧರ್ಮಸ್ಥಳದಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮವತಿ ವಿ ಹೆಗ್ಗಡೆ ಯವರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.
ಸಂಸ್ಥೆಯಿಂದ ಸ್ವ ಸಹಾಯ ಸಂಘದ ಮಹಿಳೆಯರು ವಿಶೇಷವಾಗಿ ತಯಾರಿಸಿದ ಕೈಮಗ್ಗ ಹಾಗೂ ಖಾದಿ ಉಡುಪು, ಕುರ್ತಾ ಹಾಗೂ ಕುರ್ತಿ, ಪುರುಷರ ಹಾಗೂ ಮಹಿಳೆಯರ ಉಡುಪು ಸಹಿತ ಎಲ್ಲಾ ಬಗೆಯ ಸಮವಸ್ತ್ರಗಳು, ಕೋಕಂ ಜ್ಯೂಸ್, ಉಪ್ಪಿನಕಾಯಿ, ಕರಿದ ತಿಂಡಿ, ಪುಷ್ಠಿ-ಮಕ್ಕಳ ಪೌಷ್ಠಿಕ ಆಹಾರ, ನಾನಾ ಬಗೆಯ ಲಗೇಜ್ ಬ್ಯಾಗ್, ಲ್ಯಾಪ್ ಟಾಪ್ ಬ್ಯಾಗ್, ಸ್ಕೂಲ್ ಬ್ಯಾಗ್, ಸುವಾಸನೆಯ ಅಗರಬತ್ತಿ, ಫಿನಾಯಿಲ್ ಪ್ಲೋರ್ ವಾಶ್, ಹ್ಯಾಂಡ್ ವಾಶ್, ವೆಹಿಕಲ್ ವಾಶ್ ಲಿಕ್ವಿಡ್, ಡಿಶ್‌ವಾಶ್‌ಗಳನ್ನು ಉತ್ಪಾದಿಸಲಾಗುತ್ತದೆ.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ| ಎಲ್.ಹೆಚ್ ಮಂಜುನಾಥ್, ಪ್ರಾದೇಶಿಕ ನಿರ್ದೇಶಕ ಜಯಶಂಕರ್ ಶರ್ಮಾ, ಸಂಸ್ಥೆಯ ನಿರ್ದೇಶಕಿ ಮನೋರಮಾ ಭಟ್, ಯೋಜನಾಧಿಕಾರಿ ರೋಹಿತಾಕ್ಷ ಸಲಹೆಗಾರ ನಿವೇದನ್ ಹಾಗೂ ಸಿರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.