ಯು.ಬಿ ಆಪೆ ಚಾಲಕ- ಮಾಲಕರ ಸಂಘದ ವತಿಯಿಂದ ಶಾಸಕರಿಗೆ ಸನ್ಮಾನ.

Advt_NewsUnder_1
Advt_NewsUnder_1

ಉಜಿರೆ: ಉಜಿರೆ ಬೆಳ್ತಂಗಡಿ (ಯು.ಬಿ) ಆಪೆ ಚಾಲಕ ಮಾಲಕರ ಸಂಘದ ವಾರ್ಷಿಕ ಮಹಾಸಭೆ ಮತ್ತು ನೂತನ ಶಾಸಕರಿಗೆ ಸನ್ಮಾನ, ಪುರಸ್ಕಾರ, ಆರ್ಥಿಕ ನೆರವು ಹಸ್ತಾಂತರ ಕಾರ್ಯಕ್ರಮ ಜು.8 ರಂದು ಉಜಿರೆ ಗ್ರಾ.ಪಂ ಸಭಾಂಗಣದಲ್ಲಿ ಜರುಗಿತು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ವಿಶ್ವನಾಥ ಎರ್ನೋಡಿ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಉಜಿರೆ ಗ್ರಾ.ಪಂ ಅಧ್ಯಕ್ಷ ಶ್ರೀಧರ ಪೂಜಾರಿ, ತಾ.ಪಂ ಸದಸ್ಯ ಶಶಿಧರ ಎಂ ಕಲ್ಮಂಜ, ಉಜಿರೆ ಗ್ರಾ.ಪಂ ಸದಸ್ಯರಾದ ಅಶ್ರಫ್ ಮತ್ತು ಮಂಜಪ್ಪ ಪೂಜಾರಿ, ಟ್ರಾಫಿಕ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಸುಬ್ರಾಯ ಗೌಡ, ಟ್ಯಾಕ್ಸ್ ಕನ್ಸಲ್ಟೆಂಟ್ ಟಿ. ಜೆ ಮೋರಸ್ ಶುಭ ಕೋರಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಲೆತೀಫ್ ಗೋಳಿಯಂಗಡಿ, ಸ್ಥಾಪಕಾಧ್ಯಕ್ಷ ಕೂಸಪ್ಪ ಪೂಜಾರಿ, ನೂತನ ಅಧ್ಯಕ್ಷ ವಿಶ್ವನಾಥ ನಾಯ್ಕ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ಅಕ್ಬರಾಲಿ ವರದಿ ಮಂಡಿಸಿದರು. ಶಾಹುಲ್ ಹಮೀದ್ ನಿರೂಪಿಸಿದರು.
ಸಂಘದ ಸದಸ್ಯರಾಗಿದ್ದು ಅಕಾಲಿಕವಾಗಿ ಅಗಲಿದ ಧರ್ಮಣ್ಣ ಕುಲಾಲ್ ಅವರ ಕುಟುಂಬಕ್ಕೆ ಸಂಘದ ವತಿಯಿಂದ 18 ಸಾವಿರ ರೂ. ವಿಶೇಷ ಸಾಂತ್ವನ ನಿಧಿ ಹಸ್ತಾಂತರಿಸಲಾಯಿತು. ಸಂಘದ ಸದಸ್ಯರಾಗಿದ್ದ ತನಗೆ ಪ್ರಯಾಣದ ವೇಳೆ ಬಿದ್ದು ಸಿಕ್ಕಿದ ಹಣವನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಚಾಲಕ ಗಣೇಶ್ ಗೌಡ ಅವರನ್ನು ವಿಶೇಷವಾಗಿ ಪುರಸ್ಕರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.