ಲಾಯಿಲ: ನಾಪತ್ತೆಯಾಗಿದ್ದ ಕೃಷ್ಣಪ್ಪ ಶೆಟ್ಟಿ ಮೃತದೇಹ ಪತ್ತೆ.

Advt_NewsUnder_1
Advt_NewsUnder_1

ಲಾಯಿಲ: ಇಲ್ಲಿನ ಬಜಕ್ರೆಸಾಲ್ ಯೋಗೀಶ್ ಆರ್ ಭಿಡೆ ಅವರ ಮನೆಯಲ್ಲಿ ದೀರ್ಘ ವರ್ಷಗಳಿಂದ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಲಾಯಿಲ ಗ್ರಾಮದ ಕೊರಗು ಶೆಟ್ಟಿ ಅವರ ಪುತ್ರ ಕೃಷ್ಣಪ್ಪ ಶೆಟ್ಟಿ (78 ವ.) ಅವರು ಜು. 11 ರಂದು ನಾಪತ್ತೆಯಾಗಿದ್ದು, ಇವರ ಮೃತದೇಹವು ಇಂದು ಗೇರುಕಟ್ಟೆ ಸಮೀಪದ ಭಂಡಾರಿಕೋಡಿ ಎಂಬ ನದಿ ಕಿನಾರೆಯಲ್ಲಿ  ಪತ್ತೆಯಾಗಿದೆ.

ಸುಮಾರು 80 ವರ್ಷಗಳ ತಲಾಂತರದಿಂದಲೇ ಅವರ ತಂದೆ, ತಾಯಿ ಎಲ್ಲರೂ ಬಜಕ್ರೆಸಾಲ್ ಮನೆಯಲ್ಲೇ ಖಾಯಂ ಕೂಲಿ ಕೆಲಸಗಾರರಾಗಿ ದುಡಿಯುತ್ತಿದ್ದು, ಅವರ ಮನೆಯಲ್ಲೇ ಪ್ರತ್ಯೇಕ ವಾಸ್ತವ್ಯ ಹೂಡುತ್ತಿದ್ದರು. ಜು.11 ರಂದು ಬೆಳಗ್ಗೆ 6.30 ರ ನಂತರ ಅವರು ಅವರ ವಾಸ್ತವ್ಯದ ಕೊಠಡಿಯಲ್ಲಿ ಕಾಣದೇ ಇರುವುದರಿಂದ ಅವರ ನಾಪತ್ತೆ ಬಗ್ಗೆ ಯೋಗೀಶ್ ಭಿಡೆ ಅವರು ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಬೆಳ್ತಂಗಡಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಶವ ಮಹಜರು ನಡೆಸಿದರು. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.