ಎನ್‌ಪಿಎಸ್ ನೌಕರರ ಡಿ.ಸಿ.ಆರ್.ಜಿ ಲೋಪದೋಷ ಸರಿಪಡಿಸುವಂತೆ ವಿಧಾನ ಪರಿಷತ್ ಶಾಸಕರಿಗೆ ಮನವಿ.

Advt_NewsUnder_1
Advt_NewsUnder_1

ಬೆಳ್ತಂಗಡಿ: ಇಲ್ಲಿನ ಸುವರ್ಣ ಆರ್ಕೆಡ್‌ನ ಸಪ್ತಪದಿ ಹಾಲ್‌ನಲ್ಲಿ ನಡೆದ ಸಾರ್ವಜನಿಕ ಅಭಿನಂದನಾ ಸಮಾರಂಭ ದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಭೋಜೇ ಗೌಡರಿಗೆ ತಾಲೂಕು ಎನ್‌ಪಿಎಸ್ ಸಂಘದಿಂದ ಸನ್ಮಾನ ಮಾಡಲಾಯಿತು. ಇದೇ ವೇಳೆ ಎನ್.ಪಿ. ಎಸ್. ರದ್ದತಿ, ಸರಕಾರ ರೂಪಿಸಿರುವ ಡಿ.ಸಿ.ಆರ್.ಜಿ ಲೋಪದೋಷಗಳನ್ನು ಸರಿಪಡಿಸಿ ಕೊಡುವ ಬಗ್ಗೆ ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಸುರೇಶ್ ಮಾಚಾರ್, ಕಾರ್ಯದರ್ಶಿ ಸೀತಾರಾಮ ನೆತ್ತರ ಮೊದಲಾದವರು ಮನವಿ ಸಲ್ಲಿಸಿ ಪರಿಹಾರಕ್ಕಾಗಿ ಆಗ್ರಹಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಭೋಜೇ ಗೌಡರು, ಸಾಲಮನ್ನಾದಿಂದಾಗಿ ಈ ಬಾರಿ ಬಜೆಟ್ ನಲ್ಲಿ ಎನ್‌ಪಿಎಸ್ ಬಗ್ಗೆ ತಿಳಿಸಲಾಗಿಲ್ಲ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಕ್ರಮ ವಹಿಸುತ್ತೇನೆ. ಎನ್‌ಪಿಎಸ್ ನೌಕರರು ಯಾರೂ ಧೃತಿಗೆಡಬೇಕಾದ ಅಗತ್ಯವಿಲ್ಲ. ನಾನು ನಿಮ್ಮೊಂದಿಗಿದ್ದೇನೆ ಎಂದು ಭರವಸೆ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.