19 ಹಾಲು ಉತ್ಪಾದಕರ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಚುನಾವಣೆ.

ಬೆಳ್ತಂಗಡಿ : ಉಜಿರೆ ಶ್ರೀ ಜನಾರ್ದನ ಸ್ವಾಮಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸೇರಿದಂತೆ ಬೆಳ್ತಂಗಡಿ ತಾಲೂಕಿನ 19 ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗಾಗಿ ಚುನಾವಣೆಯು ಜು. 29 ಮತ್ತು ಜು.30ರಂದು ನಡೆಯಲಿದೆ ಎಂದು ತಾಲೂಕು ಸಹಕಾರಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸುಕನ್ಯಾ ಅವರು ತಿಳಿಸಿದ್ದಾರೆ.
ಪ್ರತಿ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ನಡೆಯಲಿರುವ ನಿರ್ದೇಶಕರುಗಳ ಆಯ್ಕೆ ಚುನಾವಣೆಗೆ ಸ್ಪರ್ಧಿಸುವ ಸಂಘದ ಸದಸ್ಯರು ಅಂದು ಸಂಘದಲ್ಲಿ ಹಾಜರಿರುವ ಚುನಾವಣಾಧಿಕಾರಿಗಳಲ್ಲಿ ತಮ್ಮ ನಾಮಪತ್ರವನ್ನು ಸಲ್ಲಿಸಬೇಕು. ನಾಮಪತ್ರ ಸ್ವೀಕಾರ, ಪರಿಶೀಲನೆ, ಹಿಂತೆಗೆತ ಪ್ರಕ್ರಿಯೆಗಳು ನಡೆದ ಬಳಿಕ ಅಗತ್ಯವಿದ್ದಲ್ಲಿ ಚುನಾವಣೆ ನಡೆಸಲಾಗುತ್ತದೆ. ನಿಗದಿತ ನಿರ್ದೇಶಕ ಸ್ಥಾನಕ್ಕೆ ಅಷ್ಟೇ ನಾಮಪತ್ರಗಳು ಸಲ್ಲಿಕೆಯಾಗಿದ್ದಲ್ಲಿ ಚುನಾವಣಾಧಿಕಾರಿಗಳು ಎಲ್ಲ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆಯ ಘೋಷಣೆಯನ್ನು ಮಾಡಲಿದ್ದಾರೆ. ಈಗಾಗಲೇ ಕೆಲವೊಂದು ಸೊಸೈಟಿಗಳಲ್ಲಿ ಅವಿರೋಧದ ಆಯ್ಕೆಗೆ ಒಮ್ಮತದಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ತಯಾರಿಯೂ ನಡೆಯುತ್ತಿದೆ.
ಜು. 29 ರಂದು ಶ್ರೀ ಜನಾರ್ದನ ಸ್ವಾಮಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉಜಿರೆ- ಚುನಾವಣಾಧಿಕಾರಿ ವಸಂತ ದ್ವಿ.ದ.ಸ ತಾ.ಪಂ ಬೆಳ್ತಂಗಡಿ, ಪದ್ಮುಂಜ ಹಾಲು ಉತ್ಪಾದಕರ ಸಹಕಾರಿ ಸಂಘ- ಚುನಾವಣಾಧಿಕಾರಿ ಸುಕನ್ಯಾ ಸಹಕಾರಿ ಅಭಿವೃದ್ಧಿ ಅಧಿಕಾರಿ ಬೆಳ್ತಂಗಡಿ, ಉಜಿರೆ ಹಾಲು ಉತ್ಪಾದಕರ ಸಹಕಾರಿ ಸಂಘ- ನವೀನ್ ಕುಮಾರ್ ಅಡಿಟ್ ಇಲಾಖೆ, ಕನ್ಯಾಡಿ ಜಯನಗರ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ- ಕಿರಣ್
ಎಂ. ಕಾರ್ಯದರ್ಶಿ ನಡ ಗ್ರಾಮ ಪಂಚಾಯತು, ಗುಂಡೂರಿ ಹಾಲು ಉತ್ಪಾದಕರ ಸಹಕಾರಿ ಸಂಘ- ಚುನಾವಣಾಧಿಕಾರಿ ಸುಧಾಕರ ಡಿ. ಪಿಡಿಒ ಪಡಂಗಡಿ ಗ್ರಾಮ ಪಂಚಾಯತು.
ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘ- ಚುನಾವಣಾಧಿಕಾರಿ ರವೀಂದ್ರ ರಾಜೀವ್ ನಾಯಕ್ ಪಿಡಿಒ ಕುವೆಟ್ಟು ಗ್ರಾಮ ಪಂಚಾಯತು, ಬೆದ್ರಬೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘ- ಸುನೀಲ್ ಕುಮಾರ್ ಪ್ರ.ದ.ಸ ತಾಲೂಕು ಕಚೇರಿ ಬೆಳ್ತಂಗಡಿ, ನಾರಾವಿ ಹಾಲು ಉತ್ಪಾದಕರ ಸಹಕಾರಿ ಸಂಘ- ಮಲ್ಲಪ್ಪ ಪರಸಪ್ಪ ನಡುಗಡ್ಡಿ ಪ್ರ.ದ.ಸ ತಾಲೂಕು ಕಚೇರಿ ಬೆಳ್ತಂಗಡಿ, ಕುತ್ಲೂರು ಹಾಲು ಉತ್ಪಾದಕರ ಸಹಕಾರಿ ಸಂಘ- ಚುನಾವಣಾಧಿಕಾರಿ ಶಂಕರ್ ಪ್ರ.ದ.ಸ ತಾಲೂಕು ಕಚೇರಿ ಬೆಳ್ತಂಗಡಿ.
ಜು.30 ರಂದು ತೋಟತ್ತಾಡಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ-ಚುನಾವಣಾಧಿಕಾರಿ ನಾಗೇಂದ್ರ ಪ್ರ.ದ.ಸ ಸಹಕಾರಿ ಇಲಾಖೆ, ಪೆರೋಡಿತ್ತಾಯನಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘ- ಚುನಾವಣಾಧಿಕಾರಿ ವಾರಿಜ ಅಧೀಕ್ಷಕರು ಸಮಾಜ ಕಲ್ಯಾಣ ಇಲಾಖೆ, ನಾಲ್ಕೂರು ಹಾಲು ಉತ್ಪಾದಕರ ಸಹಕಾರಿ ಸಂಘ- ಚುನಾವಣಾಧಿಕಾರಿ ಕಿರಣ್ ಎ.ಪಿ ಪ್ರ.ದ.ಸ ತಾಲೂಕು ಕಚೇರಿ ಬೆಳ್ತಂಗಡಿ, ಅರಸಿನಮಕ್ಕಿ ಹಾಲು ಉತ್ಪಾದಕರ ಸಹಕಾರಿ ಸಂಘ-ಚುನಾವಣಾಧಿಕಾರಿ ಅಮ್ಮಿ ಕಾರ್ಯದರ್ಶಿ ಶಿಶಿಲ ಗ್ರಾಮ ಪಂಚಾಯತು, ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರಿ ಸಂಘ- ಚುನಾವಣಾಧಿಕಾರಿ ಚಂದ್ರಶೇಖರ ಪ್ರ.ದ.ಸ. ಅಡಿಟ್ ಇಲಾಖೆ.
ಶಿಶಿಲ ಹಾಲು ಉತ್ಪಾದಕರ ಸಹಕಾರಿ ಸಂಘ- ಚುನಾವಣಾಧಿಕಾರಿ ವೆಂಕಪ್ಪ ಗೌಡ ಕಾರ್ಯದರ್ಶಿ ಅರಸಿನಮಕ್ಕಿ ಗ್ರಾಮ ಪಂಚಾಯತು, ಬೆಳಾಲು ಹಾಲು ಉತ್ಪಾದಕರ ಸಹಕಾರಿ ಸಂಘ-ಗಣೇಶ್ ಪೂಜಾರಿ ಸಹಾಯಕ ಲೆಕ್ಕ ಅಧೀಕ್ಷಕರು ತಾಲೂಕು ಪಂಚಾಯತು ಬೆಳ್ತಂಗಡಿ, ಇಳಂತಿಲ ಹಾಲು ಉತ್ಪಾದಕರ ಸಹಕಾರಿ ಸಂಘ- ಚುನಾವಣಾಧಿಕಾರಿ ಶಿವಲಿಂಗಯ್ಯ ಎಂ. ಸಹಕಾರಿ ಇಲಾಖೆ, ಮಚ್ಚಿನ ಹಾಲು ಉತ್ಪಾದಕರ ಸಹಕಾರಿ ಸಂಘ- ಚುನಾವಣಾಧಿಕಾರಿ ನಾರಾಯಣ ನಾಯ್ಕ ಪಿ. ಪ್ರ.ದ.ಸ ಬಿ.ಇ.ಒ ಕಚೇರಿ ಬೆಳ್ತಂಗಡಿ, ಮುಂಡಾಜೆ ಹಾಲು ಉತ್ಪಾದಕರ ಸಹಕಾರಿ ಸಂಘ- ಚುನಾವಣಾಧಿಕಾರಿ ಮಂಜುನಾಥ್ ಆರ್.ಟಿ ಪ್ರ.ದ.ಸ ಸರಕಾರಿ ಪ್ರೌಢ ಶಾಲೆ ಕಕ್ಕಿಂಜೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.