ಬಸ್ಸು ಪಾಸ್‌ಗೆ ಆಗ್ರಹಿಸಿ ಎಬಿವಿಪಿಯಿಂದ ರಸ್ತೆ ತಡೆ.

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ರಾಜ್ಯದ ಜನರಿಗೆ ಹಲವು ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದ ರಾಜ್ಯ ಸರಕಾರವು ತನ್ನ ನೂತನ ಬಜೆಟ್ ಮಂಡಿಸಿದ್ದು ರಾಷ್ಟ್ರದ ಭವಿಷ್ಯವಾಗಿರುವ ವಿದ್ಯಾರ್ಥಿಗಳು ಪ್ರತಿನಿಧಿಸುವ ಶೈಕ್ಷಣಿಕ ಕ್ಷೇತ್ರಕ್ಕೆ ಸರಕಾರ ನೀಡಿರುವ ಅನುದಾನವನ್ನು ಗಮನಿಸಿದರೆ ವಿದ್ಯಾರ್ಥಿ ಸಮೂಹಕ್ಕೆ ನಿರಾಸೆಯಾಗಿದೆ. ಬಸ್ ಪಾಸ್, ಎಸ್.ಸಿ/ ಎಸ್.ಟಿ/ ಓಬಿಸಿ ವಿದ್ಯಾರ್ಥಿಗಳ ಸರಕಾರಿ ಹಾಸ್ಟೆಲ್‌ಗಳ ಉನ್ನತಿಗಳನ್ನು ಕಡೆಗಣಿಸಿ ಬಡವರ್ಗದ ಪ್ರತಿಭಾವಂತ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಡೆಗಣಿಸಿದ್ದು ಈ ಎಲ್ಲಾ ಸರಕಾರದ ಶೈಕ್ಷಣಿಕ ವಿರೋಧಿ ಧೋರಣೆಯನ್ನು ಖಂಡಿಸಿ ಎಬಿವಿಪಿ ಬೆಳ್ತಂಗಡಿ ವತಿಯಿಂದ ಜು. 9 ರಂದು ಬೆಳ್ತಂಗಡಿಯಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಿತು.
ಬೆಳ್ತಂಗಡಿ ಸಂತೆಕಟ್ಟೆ ಯಿಂದ ಪ್ರತಿಭಟನಾ ರ್‍ಯಾಲಿ ಮೂಲಕ ಬಸ್ ನಿಲ್ದಾಣದ ಬಳಿ ರಸ್ತೆ ತಡೆ ನಡೆಸಿ ನಂತರ ಮಿನಿ ವಿಧಾನಸೌಧದ ಬಳಿ ಕಾರ್ಯಕರ್ತರು ಧರಣಿ ಕುಳಿತು ಪ್ರತಿಭಟನೆ ನಡೆಸಿದರು. ಬಳಿಕ ತಹಶಿಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳ್ತಂಗಡಿ ತಾಲೂಕು ಸಂಚಾಲಕ ತೀಕ್ಷಿತ್ ಕೆ ದಿಡುಪೆ, ನಗರ ಕಾರ್ಯದರ್ಶಿ ಸುಮಂತ್ ಧರ್ಮಸ್ಥಳ, ಪುತ್ತೂರು ಜಿಲ್ಲಾ ಸಹ ಸಂಚಾಲಕ ಸಂದೇಶ್ ಹಾಗೂ ವೇಣೂರು ನಗರ ಕಾರ್ಯದರ್ಶಿ ಶ್ರೇಯಸ್ ಮತ್ತು ಬೆಳ್ತಂಗಡಿ ತಾಲೂಕಿನ ಪ್ರಮುಖ ಕಾರ್ಯಕರ್ತರು ಬಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.