HomePage_Banner_
HomePage_Banner_

ಜು.14: ಲಾಯಿಲ ಗ್ರಾ.ಪಂ ನಿಂದ ಮಾದರಿ ಅಂಗನವಾಡಿ, ಹಿಂದೂ ರುದ್ರ ಭೂಮಿ ಲೋಕಾರ್ಪಣೆ

ಬೆಳ್ತಂಗಡಿ: ರಾಜ್ಯದ 5620 ಗ್ರಾ.ಪಂ ಗಳ ಪೈಕಿ ಐಎಸ್‌ಒ ಮಾನ್ಯತೆ ಪಡೆದ ಏಕೈಕ ಗ್ರಾ. ಪಂ ಆಗಿರುವ ಲಾಯಿಲ ಅನೇಕ ಪ್ರಥಮಗಳ ಮೂಲಕ ರಾಜ್ಯದ ಗಮನ ಸೆಳೆದಿದ್ದು ಇದೀಗ ಮತ್ತೊಮ್ಮೆ ಅದೇ ಹೆಜ್ಜೆಯಲ್ಲಿ ಮುಂದುವರಿಯುತ್ತಾ ರಾಜ್ಯಕ್ಕೇ ಮಾದರಿಯಾದ ಹಿಂದೂ ರುದ್ರಭೂಮಿ ಮತ್ತು ಅಂಗನವಾಡಿ ಕೇಂದ್ರವನ್ನು ನಿರ್ಮಿಸಿದ್ದು ಜು. 14 ರಂದು ಲೋಕಾರ್ಪಣೆ ನಡೆಸಲಿದೆ ಎಂದು ಗ್ರಾ.ಪಂ ಉಪಾಧ್ಯಕ್ಷ ಗಿರೀಶ್ ಡೋಂಗ್ರೆ ಮತ್ತು ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದರು.
ಉದ್ಘಾಟನೆ ಸಮಾರಂಭದಲ್ಲಿ ವಿಧಾನ ಸಭೆ ಮತ್ತು ಪರಿಷತ್ ಶಾಸಕರುಗಳಾದ ಹರೀಶ್ ಪೂಂಜ ಮತ್ತು ಹರೀಶ್ ಕುಮಾರ್, ಪರಿಷತ್ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಹಿತ ವಿವಿಧ ಸ್ಥರದ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಬಳಿಕ ಸಭೆ ಮತ್ತು ಜಗದೀಶ್ ಆಚಾರ್ಯ ಬಳಗದಿಂದ ಸಂಗೀತ ರಸಮಂಜರಿ ನಡೆಯಲಿದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ತಾ.ಪಂ ಸದಸ್ಯ ಸುಧಾಕರ ಬಿ.ಎಲ್, ಗ್ರಾ.ಪಂ ಸದಸ್ಯ ರುಕ್ಮಯ್ಯ ಕನ್ನಾಜೆ, ರುದ್ರಭೂಮಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿಠಲ ಶೆಟ್ಟಿ, ಕಾರ್ಯದರ್ಶಿ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.