ಜೈನ ಬಸದಿಗಳ ಜಾಗದ ದಾಖಲೆ ಸರಿಪಡಿಸಿಕೊಡುವಂತೆ ಎಂ.ಎಲ್.ಸಿ ಮೂಲಕ ಸರಕಾರಕ್ಕೆ ಮನವಿ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ರಾಜ್ಯ ಮತ್ತು ಜಿಲ್ಲೆಯ ಎಲ್ಲಾ ಜೈನ ಬಸದಿಗಳ ಆರ್‌ಟಿಸಿಯಲ್ಲಿ ಸರಕಾರ ಎಂದು ನಮೂದಾಗಿದ್ದು ಅದನ್ನು ಸರಿಪಡಿಸಿಕೊಡುವಂತೆ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಸಚಿವರಿಗೆ ಎಂ.ಎಲ್.ಸಿ ಭೋಜೇ ಗೌಡರ ಮೂಲಕ ಮನವಿ ಸಲ್ಲಿಸಲಾಯಿತು.
ಜೈನ ಧರ್ಮ ತ್ಯಾಗ ಮತ್ತು ಅಹಿಂಸಾ ತತ್ವದ ಮೂಲಕ ನಾಡಿಗೆ ಒಳ್ಳೆಯ ಕೊಡುಗೆ ನೀಡಿದೆ. ರಾಜ್ಯ ಸಹಿತ ದ.ಕ ಜಿಲ್ಲೆಯಲ್ಲಿ ಸಾವಿರಾರು ವರ್ಷಗಳ ಇತಿಹಾಸವಿರುವ ಜೈನ ಬಸದಿಗಳು, ಅಲ್ಪ ಸಂಖ್ಯಾತರಾದ ಜೈನ ಧರ್ಮೀಯರ ಶ್ರದ್ಧಾ ಕೇಂದ್ರಗಳಿವೆ. ಬಸದಿಗಳು ಪ್ರಾಚೀನ ಕಾಲದಿಂದಲೂ ಸರಕಾರಿ ಜಾಗದಲ್ಲಿದ್ದು ಕಂದಾಯವಾಗಿ ಸ್ವಂತ ಜಾಗವನ್ನು ಹೊಂದಿರುವುದಿಲ್ಲ. ಆ ಕಾರಣದಿಂದ ಬಸದಿಗಳನ್ನು ಸರಕಾರದಿಂದ ಅನುದಾನ ಪಡೆದು ಅಭಿವೃದಿ, ದುರಸ್ತಿ, ಮೂಲಭೂತ ಸೌಕರ್ಯಗಳ ಅವಕಾಶ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಆರ್‌ಟಿಸಿಯಲ್ಲಿ ಇರುವ ತೊಂದರೆ ನಿವಾರಿಸಿಕೊಡಬೇಕು ಎಂದು ಮನವಿ ಸಲ್ಲಿಸಲಾಯಿತು.
ಜೈನ ಸಮುದಾಯದ ಪರವಾಗಿ ರತ್ನತ್ರಯ ಜೈನ ಸಂಘ ಬೆಳ್ತಂಗಡಿ ಇದರ ಪದಾಧಿಕಾರಿಗಳಾದ ಜಯಕೀರ್ತಿ ಜೈನ್ ಧರ್ಮಸ್ಥಳ, ಶಶಿಕಿರಣ್ ಜೈನ್ ಇವರು ಈ ಮನವಿ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.